ಕುಮಟಾ: ತಾಲೂಕಿನ ಮಾನೀರ ಸಮೀಪ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಅಂಕೋಲಾ ಕಡೆಯಿಂದ ಕುಮಟಾ ಮಾರ್ಗವಾಗಿ ಬರುವಾಗ ಮಾನೀರ ಸಮೀಪ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿ ಬ್ರಿಜ್ ನ ಕೆಳಗಡೆ ಬಿದ್ದಿದ್ದು ಕ್ಲೀನರ್ ಗಂಭೀರ ಗಾಯಗೊಂಡಿದ್ದಾನೆ.
ಲಾರಿಯಲ್ಲಿ ಸಿಲುಕಿಕೊಂಡಿದ್ದ ಗಣೇಶ ಮತ್ತು ಚಂದು ಇಬ್ಬರನ್ನು ಸ್ಥಳಿಯರ ಸಹಾಯದಿಂದ ಮೇಲಕ್ಕೆ ಎತ್ತಿ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಸವಾರ ಶಿವು ಗೌಡ ಎಂದು ಹೇಳಲಾಗಿದ್ದು, ಹರಕಡೆ ಮೂಲದವನು ಎನ್ನಲಾಗಿದೆ.ಬೈಕ್ ಸವಾರನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದುಬರಬೇಕಿದೆ.
ವರದಿ: ಮಂಜುನಾಥ ಹರಿಜನ.