ಯಲ್ಲಾಪುರ : ವಿಳಾಸ ಕೇಳುವ ನೆಪದಲ್ಲಿ ಬಂದು ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 25.09.2023ರಂದು ನಡೆದ ಕಳ್ಳತನ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಫ್ಜಲ್ ಖಾದರ್ ಗೌಸ್ ಗವಾರಿ ಹಾಗೂ ಶಿರಸಿ ತಾಲೂಕಿನ ರಾಮನ ಬೈಲ್ ಗ್ರಾಮದ ಪೈಜಾಮ್ ಅಬ್ದುಲ್ ಸಮದ ಮುಲ್ಲಾ ಎಂಬುವವರನ್ನು ಬಂಧಿಸಿದ್ದಾರೆ ಬಂದಿದ್ದರಿಂದ ಕಳ್ಳತನಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್, ಕಳ್ಳತನ ಮಾಡಿದ್ದ 55 ಗ್ರಾಂ ಬಂಗಾರದ ಆಭರಣ ಸೇರಿದಂತೆ ಒಟ್ಟು 4ಲಕ್ಷ 70 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ್ ಅವರ ನೇತೃತ್ವದಲ್ಲಿ ಪಿಎಸ್ಐ ರವಿ ಗುಡ್ಡಿ ಹಾಗೂ ನಿರಂಜನ್ ಹೆಗಡೆ ಎಎಸ್ಐ ಗಣಪತಿ ಬೆನಕಟ್ಟಿ ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಶಫಿ, ಬಸವರಾಜ್ ಹಗರಿ,ಗಿರೀಶ್ ಲಮಾಣಿ, ಶೋಭಾ ನಾಯ್ಕರವರು ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.