ಬಾಗಲಕೋಟೆ: ಸಾರಾಯಿ ನಿಷೇಧ ಮಾಡುವಂತೆ ಹಾಗೂ ಇದೀಗ ಕಾಂಗ್ರೆಸ್ ಸರ್ಕಾರ ಪಂಚಾಯಿತಿಗೊಂದು ಮಧ್ಯದ ಅಂಗಡಿ ಎಂಬ ಹೊಸ ಯೋಜನೆಯನ್ನು ಆರಂಭಿಸಿದ್ದರಿಂದ ಬಾಗಲಕೋಟೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಸಂಪೂರ್ಣವಾಗಿ ಮಧ್ಯ ಮಾರಾಟ ನಿಷೇಧ ಮಾಡುವಂತೆ ರಾತ್ರೋರಾತ್ರಿ ಜಿಲ್ಲಾಡಳಿತದ ಮುಂದೆ ಮಹಿಳೆಯರು ಧರಣಿ ಕುಳಿತಿದ್ದಾರೆ. ಮಧ್ಯ ಮಾರಾಟ ನಿಷೇಧಿಸುವ ಕುರಿತು ಸುಮಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದರು ಸಹ ಯಾವ ಸರ್ಕಾರವೂ ನಿಷೇಧ ಮಾಡುತ್ತಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಈ ಮಹಿಳೆಯರಲ್ಲಿ ಸಾರಾಯಿ ಕುಡಿದು ಕುಡಿದು ಗಂಡನನ್ನು ಹಾಗೂ ತಮ್ಮ ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡವರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ಸಹ ಬಾಗಲಕೋಟೆ ಜಿಲ್ಲೆಗೆ ಸೇರಿದವರಾಗಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುತ್ತಾ? ಕಾದು ನೋಡಬೇಕಿದೆ.
ವರದಿ: ವಿಶ್ವನಾಥ ಭಜಂತ್ರಿ