ವಿಕ್ರಾಂತ್ ರೋಣ ಚಿತ್ರವನ್ನು ತಾವು ಯಾವುದೇ ಭಾಷೆಯಲ್ಲಿ ನೋಡಲು ಮುಂದಾದರು ಮದ್ಯದಲ್ಲಿ ತಮಗೆ ಇಷ್ಟಬಂದ ಭಾಷೆಗೆ ಬದಲಾಯಿಸಿಕೊಳ್ಳಬಹುದು ಹೌದು ವಿಕ್ರಾಂತ್ ರೋಣ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ಈ ರೀತಿಯ ಅವಕಾಶವನ್ನು ಸಿನಿಪ್ರಿಯರಿಗೆ ಮಾಡಿಕೊಟ್ಟಿದೆ. ವಿಕ್ರಾಂತ್ ರೋಣ ಚಿತ್ರವನ್ನು ಸಿನಿ ಡಬ್ ಮಾಡಲಾಗಿದೆ ಸಿನಿ ಡಬ್ ಎಂದರೆ ಚಿತ್ರಮಂದಿರದಲ್ಲಿ ತಾವು ವಿಕ್ರಾಂತ್ ರೋಣದ ಯಾವುದೇ ಭಾಷೆಯ ಆವೃತ್ತಿಯನ್ನು ನೋಡಲು ಹೋಗಿದ್ದರೂ ಸಹ ಮಧ್ಯದಲ್ಲಿ ತಾವು ಬೇರೆ ಭಾಷೆಯನ್ನು ನೋಡಲು ಇಚ್ಛಿಸಿದಾಗ ಮೊಬೈಲ್ ನಲ್ಲಿ ಅಪ್ಲಿಕೇಷನ್ ಬಳಸಿ ಹೆಡ್ ಫೋನ್ ಮೂಲಕ ತಮಗೆ ಬೇಕಾದ ಭಾಷೆಯಲ್ಲಿ ಸಿನಿಮಾದ ವಾಯ್ಸನ್ನು ಸೆಲೆಕ್ಟ್ ಮಾಡಿ ಕೇಳಬಹುದು. ಈ ಮೊಬೈಲ್ ಅಪ್ಲಿಕೇಶನ್ ಚಿತ್ರಮಂದಿರದ ಒಳಗೆ ಮಾತ್ರ ಕೆಲಸ ಮಾಡುತ್ತದೆ. ಅಂದರೆ ಚಿತ್ರಮಂದಿರದ ಒಳಗೆ ಇದ್ದಾಗ ಮಾತ್ರ ತಾವು ವೀಕ್ಷಿಸುತ್ತಿರುವ ಚಿತ್ರಮಂದಿರ ಹಾಗೂ ಸಮಯವನ್ನು ಹಾಕಿದಲ್ಲಿ ಮಾತ್ರ ಅದು ತಮಗೆ ಎಲ್ಲಾ ಭಾಷೆಗಳಲ್ಲಿ ಶಬ್ದಗಳನ್ನು ಕೇಳಲು ಅವಕಾಶ ನೀಡುತ್ತದೆ. ಈ ರೀತಿಯ ತಂತ್ರಜ್ಞಾನ ಬಳಸಿರುವುದು ಕನ್ನಡ ಚಿತ್ರರಂಗದಲ್ಲೇ ವಿಕ್ರಾಂತ್ ರೋಣ ಚಿತ್ರಕ್ಕೆ ಮೊದಲು. ಒಂದೇ ಚಿತ್ರಮಂದಿರದಲ್ಲಿ ಕುಳಿತು 6 ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದು. ವಿಕ್ರಂ ರೋಣ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರತಂಡದಿಂದ ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಇದರಿಂದ ನಿರೀಕ್ಷಿಸುತ್ತಿರುವ ಜನರಲ್ಲಿ ಹೊಸ ರೀತಿಯ ಕುತೂಹಲ ಹೆಚ್ಚುತ್ತಿದ್ದು ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವಾವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ತಿಂಗಳು 28 ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.