ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಚಿಗುರೊಡೆದು ಅದು ಮದುವೆಯ ಬಂಧವಾಗಿರುವ ಉದಾಹರಣೆಗಳೂ ಇವೆ. ಇದೀಗ ಮೈಕೆಲ್ ಮತ್ತು ಈಶಾನಿ ಮಧ್ಯೆ ಪ್ರೇಮಾಂಕುರವಾಗಿದೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದನ್ನು ಅವರು ಅಧಿಕೃತವಾಗಿಯೇ ಸ್ವತಃ ತಾವೇ ಹೇಳಿಕೊಂಡಿದ್ದಾರೆ.
ಮೈಕೆಲ್ ಅಜಯ್ ಅವರು ಈಶಾನಿ ಇನ್ಮುಂದೆ ಅಧಿಕೃತವಾಗಿ ನನ್ನ ಗರ್ಲ್‌ಫ್ರೆಂಡ್ ಎಂದು ಹೇಳಿದ್ದಾರೆ. ಇಂದಿನಿಂದ ನನ್ನ ತಂಗಿ ಅಧಿಕೃತವಾಗಿ ಮೈಕೆಲ್ ಗರ್ಲ್‌ಫ್ರೆಂಡ್ ಎಂದು ಎಲ್ಲರಿಗೂ ಕೇಳುವಂತೆ ವಿನಯ್ ಗೌಡ ಜೋರಾಗಿ ಕೂಗಿ ಹೇಳಿದ್ದಾರೆ. ಇದನ್ನು ಕೇಳಿ ಮನೆಯವರು ಸಹ ಸಂಭ್ರಮಿಸಿದ್ದಾರೆ.
ಮೈಕೆಲ್ ಅಜಯ್ ಮತ್ತು ಈಶಾನಿ ನಡುವೆ ಪ್ರೇಮದ ಹೂವು ಅರಳಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸಂಬಂಧವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಟಾಸ್ಕ್, ನಾಮಿನೇಟ್ ಪ್ರತಿ ಹೆಜ್ಜೆಯಲ್ಲೂ ಇದೊಂದು ಚಾಲೆಂಜ್ ಆಗಿರುತ್ತದೆ. ಇನ್ಮುಂದೆ ಈಶಾನಿ ಮತ್ತು ಮೈಕೆಲ್ ಈ ಎಲ್ಲ ಚಾಲೆಂಜ್‌ಗಳನ್ನ ಫೇಸ್ ಮಾಡಿ ಸಂಬಂಧವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.