ಕೋಲಾರ ಜಿಲ್ಲೆ:- ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಘಟಕದಲ್ಲಿ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಆರು ದಿನದ ಗಂಡು ಮಗು ಮಾಲೂರು ಪಟ್ಟಣದ ಪಾಟೇಲ್ ಬೀದಿ ಮೂಲದ ಪೂವರಸನ್ ನಂದಿನಿ ದಂಪತಿಗಳವರ ಗಂಡು ಶಿಶು ನಾಪತ್ತೆ.
ಈ ವಿಚಾರವಾಗಿ ಆಸ್ಪತ್ರೆ ಆಡಳಿತ ಮತ್ತು ಸಿಬ್ಬಂದಿಯಿಂದ ಸಿಸಿ ಟಿವಿ ಪರಿಶೀಲನೆ. ಮಾಸ್ಕ್ ಧರಿಸಿ ಅಪರಿಚಿತ ಮೂರು ಮಹಿಳೆಯರು ಬ್ಯಾಗ್ ನಲ್ಲಿ ಗಂಡು ಶಿಶುವನ್ನು ಹೊತ್ತೊಯ್ದುರುವ ಶಂಕೆ. ಗಂಡು ಮಗು ಕಳೆದುಕೊಂಡ ತಾಯಿ ಹಾಗೂ ಸಂಬಂಧಿಕರಿಂದ ಕಣ್ಣೀರು. ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಅಪಹರಿಸಿದ ಮೂರು ಮಹಿಳೆಯರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು.
ಮಾಲೂರಿನ ಟೌನ್ ನಲ್ಲಿ ಮೆಡಿಕಲ್ ಶಾಪ್ ಒಂದರಲ್ಲಿ ಪೊನ್ ಪೇ ಮಾಡದರ ಬಗ್ಗೆ ಆಟೋ ಚಾಲಕರಿಂದ ಮಾಲೂರು ಪೋಲಿಸ್ ಠಾಣೆ ಇನ್ಸಪೆಕ್ಟರ್ ವಸಂತ ಕುಮಾರ್ ರವರು ತಮ್ಮ ಶೋಧಕಾರ್ಯ ಮುಂದುವರಿಸಿ ಕೋಲಾರ ಗಡಿ ತಮಿಳುನಾಡಿನ ಬೇರಿಕೆ ಬಳಿ ಮಗುವನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದ ಕೋಲಾರ ನಗರ ಠಾಣಾ ಪೊಲೀಸರು. ಮಗುವನ್ನು ಕಳ್ಳತನ ಮಾಡಿ ತಮಿಳುನಾಡು ಗೆ ಸಾಗಿಸುತ್ತಿದ್ದ ಸ್ವಾತಿ ಅನ್ನೋ ಓರ್ವ ಮಹಿಳೆ ಬಂಧನ. ಇನ್ನು ಉಳಿದ ಇಬ್ಬರು ಮಹಿಳಾ ಮಗು ಕಳ್ಳಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ವರದಿ:- ನೀಲಾರ್ಜುನ್ ಬಿ.ಎಸ್