ಇತ್ತೀಚೆಷ್ಟೇ ಮದುವೆಯಾಗಿದ್ದ ಯುವ ಜೋಡಿ ಸುಖವಾಗಿ ಸಂಸಾರ ಮಾಡಬೇಕಿದ್ದ ಯುವಕ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮೂಲದ(ಕೋಟಿಲಿಂಗೇಶ್ವರ ನಗರ ನಿವಾಸಿ) ನಿಖಿಲ್ ಕುಂದಗೋಳ ಮತ್ತು (ಕೇಶ್ವಪೂರದ ನಿವಾಸಿ) ಪ್ರೀತಿ ಪೋಗಳಾಪೂರ್ ಎಂಬ ಯುವತಿ ಇತ್ತೀಚೆಷ್ಟೇ ವಿವಾಹವಾಗಿದ್ದರು ಮೊದಲಿಗೆ ನಿಖಿಲ್ ಹಾಗೂ ಪ್ರೀತಿ ಇಬ್ಬರು ತಕ್ಕ ಮಟ್ಟಿಗೆ ಸಂಸಾರ ಮಾಡುತ್ತಿದ್ದರು ದಿನ ಕಳೆದಂತೆ ನಿಖಿಲ್ ಕುಟುಂಬದಲ್ಲಿ ಪ್ರೀತಿ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ಗೊತ್ತಾಗಿ ನಿಖಿಲ್ ಹಲವಾರು ಬಾರಿ ಹೆಂಡತಿ ಪ್ರೀತಿಗೆ ಬುದ್ಧಿವಾದ ಹೇಳಿದರೂ ಪ್ರೀತಿ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ಹಾಗೆಯೇ ತನ್ನ ಚಾಳಿಯನ್ನು ಮುಂದುವರೆಸಿದ್ದಳು ಇದನ್ನೇ ಬಂಡವಾಳವಾಗಿಸಿಕೊಂಡ ಪ್ರೀತಿ ನಿಖಿಲ್ ನ ಮಾತಿಗೆ ಕೆಂಡಾಮಂಡಲ ಆಗಿ ತನ್ನ ತವರು ಮನೆಗೆ ಹೋಗಿದ್ದಳು ಹಾಗೂ ಪ್ರೀತಿ ಕೇಶ್ವಪೂರ್ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ನಿಖಿಲ್ ಕುಂದಗೋಳ ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪಿರ್ಯಾದಿ ನೀಡಿದ್ದಾಳೆ ನಂತರ ಕೇಶ್ವಪೂರ್ ಪೊಲೀಸ್ ಠಾಣೆಯ ಪೊಲೀಸರು ನಿಖಿಲ್ ನನ್ನು ವಿಚಾರಣೆಗೆ ಕೆಶ್ವಾಪೂರ್ ಪೊಲೀಸ್ ಠಾಣೆಗೆ ಕರೆಯಿಸಿ ನೀನು ಪ್ರೀತಿಗೆ ಏನೂ ಕಿರುಕುಳ ಕೊಡಬೇಡ ಕೊಟ್ಟರೆ ನಿನ್ನ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕಾಗಿತ್ತದೆ ಎಂದು ಆವಾಜ್ ಹಾಕಿದ್ದಾರೆ ಇದರಿಂದ ಮನನೊಂದ ನಿಖಿಲ್ ಮನೆಗೇ ಬಂದು ರಾತ್ರಿ ಮಲಗಿದ್ದ ಮುಂದೆ ಬೆಳಿಗ್ಗೆ ಆಗುವಷ್ಟರಲ್ಲಿ ಬೇಡರೂಮ್ ನ ಫ್ಯಾನ್ ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ನಮ್ಮ ಮಗ (ನಿಖಿಲ್ ಕುಂದಗೋಳ) ಪ್ರೀತಿ ಕುಟುಂಬಸ್ಥರು ಹಾಗೂ ಕೇಶ್ವಾಪೂರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಾತೆನಹಳ್ಳಿ ಹಾಗೂ ಎಎಸ್ಐ ಜಯಶ್ರೀ ಛಲವಾದಿ ರವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಿಖಿಲನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸುತ್ತಿದ್ದಾರೆ ಕುಟುಂಬದ ಕಲಹದ ಹಿನ್ನೆಲೆಯಲ್ಲಿ ನಿಖಿಲ್ ಆತ್ಮಹತ್ಯೆಗೆ ಶರಣಾಗಿದ್ದು ಈ ಪ್ರಕರಣ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯಾಗಿ ನಿಖಿಲ್ ನ ಆತ್ಮಹತ್ಯೆಗೆ ಕಾರಣವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ನಿಖಿಲ್ ಕುಟುಂಬಸ್ಥರು ಹೇಳುತ್ತಿದ್ದಾರೆ.
ವರದಿ: ಶಿವು ಹುಬ್ಬಳ್ಳಿ .