ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೋಕು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಮ್ಮ ಪತ್ರಿಕಾ ವರದಿಗೆ ಎಚ್ಚೆತ್ತು ಬೂಕನಕೆರೆ ಹೋಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದಾರೆ.
ಬೂಕನಕೆರೆ ಗ್ರಾಮವೂ ಹೋಬಳಿಯ ಕೇಂದ್ರ ವಾಗಿರುವುದರಿಂದ ಇಲ್ಲಿನ ಸ್ಥಳೀಯ ವಾಗಿ ಸಂಪರ್ಕ ಕಲ್ಪಿಸುವ ಕೃಷ್ಣರಾಜಪೇಟೆ ಇಂದ ಮೊದೂರು ಮಾರ್ಗವಾಗಿ ಬೂಕನಕೆರೆಯಿಂದ ಕೆ ಆರ್ ಎಸ್ ಹಾಗು ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂರಾರು ಗುಂಡಿಗಳ್ಳನ್ನು ಮುಚ್ಚಿ ಸರಿಪಡಿಸುವ ಕಾರ್ಯವನ್ನು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗು ಈ ಮಾರ್ಗದಲ್ಲಿ ಸಂಚಾರಿಸುವ ಎಲ್ಲ ವಾಹನ ಸವಾರರಿಗೆ ಸಂತೋಷ ವಾಗಿರುತ್ತದೆ. ಈ ರಸ್ತೆಯಲ್ಲಿ ನೋರ್ರಾರು ಗುಂಡಿಗಳಿದ್ದರು ಇಲ್ಲಿವರೆಗೆ ಯಾವ ಅಧಿಕಾರಿಗಳು ಗಮನ ಹರಿಸದೆ ಕಾಲ ಹರಣ ಮಾಡುತ್ತಿದ್ದರು ಇದರಿಂದ ಈ ಮಾರ್ಗದಲ್ಲಿ ಸಂಚಾರಿಸುವ ಎಲ್ಲರೂ ಅಧಿಕಾರಿಗಳಿಗೆ ಹಾಗು ತಾಲೋಕು ಜನಪ್ರದಿನಿದಿಗಳಿಗೆ ಶಾಪ ಹಾಕುತ್ತ ಕಾಲ ದೂಡುತ್ತಿದ್ದರು. ಬೂಕನಕೆರೆ ಗ್ರಾಮವೂ ಮಾನ್ಯ ಮಾಜಿ ಸಿ ಎಮ್ ಯಡಿಯೂರಪ್ಪ ನವರತವರು ಗ್ರಾಮವಾದರೂ,ಹಾಗು ಇಲ್ಲಿನ ಸುತ್ತ ಮುತ್ತಲಿನ ಸ್ಥಳೀಯ ಗ್ರಾಮದ ಜನರ ಹೋಬಳಿ ಕೇಂದ್ರವಾಗಿದೆ ನಿತ್ಯ ನೂರಾರು ಜನರು ಇಲ್ಲಿ ಓಡಾಡುವುದು ಸಾಮಾನ್ಯವಾಗಿದೆ , ಹಾಗು ಇಲ್ಲಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹಾಳಾಗಿರುತ್ತವೆ,ಆದ್ದರಿಂದ ಇದನ್ನು ಗಮನಿಸಿ ವರದಿ ಮಾಡಿದ ಎರಡು ತಿಂಗಳ ನಂತರ ತಾಲೋಕಿನ ಶಾಸಕಾರದ ಮಂಜಣ್ಣ ನವರ ಗಮನಕ್ಕೆ ಬಂದು ಇದರ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ರಸ್ತೆ ಗುಂಡಿ ಮುಚ್ಚಲು ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದ ನಂತರ ಅಧಿಕಾರಿಗಳು ಈ ರಸ್ತೆಯಲ್ಲಿನ ಗುಂಡಿಗಳ್ಳನ್ನು ಮುಚ್ಚಿ ಸರಿಪಡಿಸಿದ್ದಾರೆ.. ನಮ್ಮ ವರದಿಗೆ ಸ್ವಂದಿಸಿದ ಮಾನ್ಯ ಶಾಸಕರು ಹಾಗು ಅಧಿಕಾರಿಗಳ್ಳನ್ನು ಈ ಮಾರ್ಗದಲ್ಲಿ ಸಂಚಾರಿಸುವ ಜನರು ದಿನವು ನೆನೆಯುತ್ತಾರೆ ಹಾಗು ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಢಾoಬರಿಕರಣ ಮಾಡುವುದಾಗಿ ಶಾಸಕರಾದ ಮಂಜಣ್ಣ ರವರು ಭರವಸೆ ನೀಡಿರುತ್ತಾರೆ. ಹಾಗು ಬೂಕನಕೆರೆ ಗ್ರಾಮವನ್ನು ಮಾದರಿಯಾಗಿ ಹಂತ ಹಂತವಾಗಿ ಅಭಿರುದ್ದಿ ಗೊಳಿಸಲಾಗುವುದು ಎಂದು ತಿಳಿಸಿರುಸುತ್ತಾರೆ.
ವರದಿ: ಎಲ್.ಎನ್ ಮೂರ್ತಿ