ನಿಡಗುಂದಿ: ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಲಿಯಾಳ ಗ್ರಾಮದ ರಸ್ತೆಯೆಲ್ಲ ಚರಂಡಿಮಯ ಆಗಿದ್ದರು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಇರುವುದು ಶೋಷನಿಯ ವಿಷಯ. ಇಲ್ಲಿನ ಗ್ರಾಮದ ಜನರು ದಿನಾಲೂ ಸಂಚರಿಸಲು ಹರ ಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ,ಗ್ರಾಮದ ಎಸ್ ಸಿ ಕಾಲೊನಿ ಹದಗೆಟ್ಟು ಹೋಗಿದ್ದು ಗ್ರಾಮ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದ ತುಂಬೆಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸರಿಯಾಗಿ ಸಿಸಿ ರಸ್ತೆ ಕೂಡಾ ನಿರ್ಮಿಸಿಲ್ಲ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಕಡೆ ಬರೋದೇ ಇಲ್ಲ. ತಾವು ಆಯಿತು ತಮ್ಮ ಕೆಲಸ ಆಯ್ತು ಎನ್ನುವ ರೀತಿಯಲ್ಲಿ ಇದ್ದಾರೆ. ಪಂಚಾಯತಿ ಅಲ್ಲಿ ದುಡ್ಡು ಹೊಡೆಯುವ ಕೆಲಸ ಮಾತ್ರ ಮಾಡುತ್ತಾರೆ. ಇಂತಹ ಜನಪರ ಕೆಲಸ ಅವರಿಗೆ ಅಸಾದ್ಯ ಎಂದು ಗ್ರಾಮದ ಜನರು ಅಲ್ಲಲ್ಲಿ ಪಿಸುಗುಡುತ್ತಾರೆ. ವರದಿ ಕಂಡ ಮೇಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಬೇಜಾವಾಬ್ದಾರಿ ಅಧಿಕಾರಿಗಳಿಗೆ ಬಿಸಿ ತಟ್ಟಿಸಿ, ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುತ್ತಾರೋ ಇಲ್ಲವೋ ಕಾದು ನೋಡೋಣ.
ವರದಿ:ಸಂಗಪ್ಪ ಚಲವಾದಿ
Super news
Shivapur h taluk Mudalgi district Belgavi 591312
Super news