ಕುಂದಗೋಳ; ತಾಲೂಕಿನ ಗುಡಗೇರಿಯಿಂದ ಗೌಡಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಸಂಪೂರ್ಣ ಬಿರುಕು ಬಿಟ್ಟು ಗುಣಮಟ್ಟದ ಕೊರತೆಯಿಂದ ಕಳೆಪೆಗೆ ಹಿಡಿದ ಕೈನ್ನಡಿಯಾಗಿದೆ.

ಸಿಮೆಂಟ್ ಗೆ 50 ವರ್ಷವಾದರೂ ಬಾಳ್ವಿಕೆ ಇದೆ ಎಂದು ನಮ್ಮಲ್ಲಿ ರಿಗೂ ತಿಳಿದಿರುವ ವಿಚಾರ. ಆದರೆ ಈ ಸಿಸಿ ರಸ್ತೆ ಬಿರುಕು ಬಿಟ್ಚಿದ್ದು ನೋಡಿದರೆ ಸಂಪೂರ್ಣ ಕಳೆಪೆಯಾಗಿದೆ. ರಸ್ತೆಯಲ್ಲಿ ಬಿರುಕು ಬಿಟ್ಟ ಮಧ್ಯದಲ್ಲಿ ಸಣ್ಣ ಸಣ್ಣ ಹುಲ್ಲು, ಕಸ ಬೆಳೆದಿದೆ,ಇನ್ನೂ ದ್ವಿಚಕ್ರವಾಹನ ಸವಾರರು ಈ ರಸ್ತೆಯಲ್ಲಿ ಸಂಚಾರಸಬೇಕಾದರೆ ಬಿರುಕು ಬಿಟ್ಟ ರಸ್ತೆಯಲ್ಲಿ ವಾಹನ ಸವಾರ ಮಾಡಿದರೆ ಶೇಕ್ ಆಗುತ್ತದೆ. ಜೊತೆಗೆ ಆಯಾ ತಪ್ಪಿದರೆ ಸ್ಕಿಡ್ ಆಗಿ ಬಿಳುವ್ವ ಗೀಳಿಗೆ ಈಡಗಾವುದು ಸಂಶಯವೇ ಇಲ್ಲ, ಅಷ್ಟೊಂದು ಅವ್ಯವಸ್ಥೆ ಕ್ಕೆ ತಲುಪಿದ ಅಂದರೆ ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಮೇಲ್ನೋಟಕ್ಕೆ ಕಂಡು ಬರುತ್ತದೆ.

ಇದು ಗುತ್ತಿಗೆದಾರನ ಎಡವಟ್ಟೂ ಅಥವಾ ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ಕೈವಾಡನ? ಒಂದು ಗೊತ್ತಿಲ್ಲ ಒಟ್ಟಾರೆ ಕುಂದಗೋಳ ತಾಲೂಕಿನ ಗುಡಗೇರಿಯಿಂದ ಗೌಡಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕು ಬಿಟ್ಟರಿವುದು ಅಧಿಕಾರಿಗಳು ಗಮನಕ್ಕೆ ಇದ್ರೂ ಸಹ ಅಭಿವೃದ್ಧಿ ಗೆ ಮುಂದಾಗಿ ಯಲ್ಲಿ. ಇದು ಬಿಸಿಲಿನ ತಾಪಕ್ಕೆ ಬಿರುಕು ಬಿಡುತ್ತದೆ, ಹಾಗಾಗಿ ಈ ರಸ್ತೆ ಅವ್ಯವಸ್ಥೆ ತಲುಪಿದೆ ಅಂತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.

ಗುಣಮಟ್ಟದ ಸಿಮೆಂಟ್ ಬಳಸಬೇಕು ಎಂದು ಸರಕಾರ ಇಲಾಖೆಗಳಿಗೆ ನಿರ್ದೇಶನ ನೀಡಿದರು ಸಹ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ, ಹಾಗಾದರೆ ಸರಕಾರ ಸಲಹೆ ನೀಡಿರುವ ಸಿಮೆಂಟ್ ಬಳಸಿಲ್ಲಿವ್ವ? ಅನ್ನುವುದೂ ಮೇಲ್ನೋಟಕ್ಕೆ ಕಂಡು ಬರ್ತಾ ಇದೆ.
ಸರಕಾರ ಬಳಸುವು ಸಿಮೆಂಟ್ ಬಳಿಸಿದ್ದರ್ರೇ ಹೀಗೆ ಬಿರುಕು ಬಿಡುತ್ತಾ? ಇವರುಗಳು ಯಾವು ಸಿಮೆಂಟ್ ಅನ್ನು ಬಳಿಸಿದರೂ ಅಂತ ಸ್ಪಷ್ಟೀಕರಣ ಅಧಿಕಾರಿ ವರ್ಗ ನೀಡ ಬೇಕಾಗಿದೆ. ಹಾಗಾದರೆ ಸಿಸಿ ರಸ್ತೆ ಬಿರುಕು ಬಿಡಲು ಕಾರಣವೇನು?

ಈ ಬಗ್ಗೆ ಕುಂದಗೋಳ ತಾಲೂಕಿನ ಲೋಕೋಪಯೋಗಿ ಇಲಾಖೆ ಕುಂದಗೋಳ ವಿಭಾಗ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು.

“ಗುಡಗೇರಿಯಿಂದ- ಗೌಡಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೋ ಬಿಸಿಲಿನ ತಾಪಕ್ಕೆ ಹಾಗೇ ಆಗುತ್ತೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜೊತೆಗೆ ನಮ್ಮ ಸಿಬ್ಬಂದಿ ಕಛೇರಿಯಲ್ಲಿ ಇಲ್ಲ ಹಾಗಾಗಿ ನೀವು ಮಂಗಳವಾರ ಬನ್ನಿ ಅವರನ್ನ ಕೇಳಿ ಮಾಹಿತಿ ಕೊಡುತ್ತೇನೆ ಎಂದರು”
-ಸುಧಾಕರ ಬಾಗೇವಾಡಿ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪವಿಭಾಗ ಕುಂದಗೋಳ

ಒಟ್ಟನಲ್ಲಿ ಬಿರುಕು ಬಿಟ್ಟ ರಸ್ತೆಯನ್ನು ಸರಿಪಡಿಸಿ ವಾಹನ ಸವಾರರಿಗೆ ಇಲ್ಲಿಯ ಗ್ರಾಮಸ್ಥರಿಗೆ ಸುಗಮವಾಗಿ ಸಂಚರಿಸಲು ಅಧಿಕಾರಿಗಳು ಮುಂದಾಗುತ್ತಾರರೋ ಇಲ್ಲವೆ ಕಾದು ನೋಡಬೇಕು.

ವರದಿ: ಶಾನು ಯಲಿಗಾರ

error: Content is protected !!