ಮದ್ದೂರು: ಕಾಲೇಜಿಗೆ ಹಾಗೂ ತಮ್ಮ ಊರುಗಳಿಗೆ ಹೋಗಬೇಕಾದಂತಹ ವಿದ್ಯಾರ್ಥಿಗಳು ಸರಿಯಾದ ರೀತಿಯ ಬಸ್ ವ್ಯವಸ್ಥೆ ಇಲ್ಲದ ಕಾರಣ ಇರುವ ಕೆಲವು ಬಸ್ಸುಗಳಲ್ಲಿ ಕುರಿಗಳ ಹಾಗೆ ತುಂಬಿಕೊಂಡು ಬಾಗಿಲಲ್ಲಿ ನೇತಾಡಿಕೊಂಡು ಹರಸಾಹಸ ಪಡುತ್ತಾ ಹೋಗುತ್ತಾರೆ. ಸಾರಿಗೆ ಇಲಾಖೆ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಕಲ್ಪಿಸದೆ ಇರುವ ಕಾರಣವೇ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡಿಕೊಂಡು ಹರಸಾಹಸ ಪಡುತ್ತಿರುವುದು. ಇದು ಮದ್ದೂರು ಬಸ್ ಸ್ಟಾಪ್ ನಲ್ಲಿ ಕಂಡು ಬಂದಂತಹ ದೃಶ್ಯ. ಚಿಕ್ಕವರು, ದೊಡ್ಡವರು, ಗಂಡು, ಹೆಣ್ಣು ಯಾವುದನ್ನೂ ಲೆಕ್ಕಿಸದೆ ಕುರಿಗಳನ್ನು ತುಂಬಿಕೊಳ್ಳುವ ಹಾಗೆ ಬಸ್ಸಿನ ತುಂಬಾ ತುಂಬಿಕೊಂಡು ಬಾಗಿಲಲ್ಲು ಸಹ ಜೋತಾಡಿಕೊಂಡು ಹೋಗುತ್ತಿರುವುದನ್ನು ಕೆಲ ಸ್ಥಳೀಯರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೂ ಸಹ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಹೆಚ್ಚಿನ ಬಸ್ಸುಗಳ ಆವಶ್ಯಕತೆ ಇದ್ದರೂ ಸಾರಿಗೆ ಇಲಾಖೆ ಕಲ್ಪಿಸದಿರುವುದನ್ನು ವಿರೋಧಿಸಿ ದಿನವೂ ವಿದ್ಯಾರ್ಥಿಗಳು ಸಾರಿಗೆ ಇಲಾಖೆಗೆ ಬೈದುಕೊಂಡೆ ಇರುವ ಬಸ್ಸಿನಲ್ಲಿ ಹರಸಾಹಸ ಪಡುತ್ತಾ ಚಲಿಸುತ್ತಿದ್ದಾರೆ.