ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಮೇಕೆ ಮೇಯಿಸಲು ಹೋಗುತ್ತಿದ್ದ 17 ವರ್ಷದ ದಲಿತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಸುರೇಶ್ ಎಂಬಾತ ಈ ಕೃತ್ಯವೆಸಗಿದವನು.
ಈ ಕೃತ್ಯಕೆ ಮಹಿಳೆಯೊಬ್ಬಳ ಸಹಕಾರ ಇತ್ತು ಎನ್ನಲಾಗಿದೆ. ಈ ವಿಷಯವನ್ನು ಹೊರಗೆ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಮಾತ್ರವಲ್ಲದೇ ಮದುವೆ ಆಗುವುದಾಗಿ ನಂಬಿಸಿ, ಪದೇಪದೇ ಆಕೆಯೊಂದಿಗೆಬಲವಂತವಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ ಎಂದು ಹೇಳಲಾಗುತ್ತಿದೆ
ಬಾಲಕಿ ತನಗೆ ಅರಿವಿಲ್ಲದೆ ಏಳು ತಿಂಗಳ ಗರ್ಭಿಣಿ ಯಾಗಿದ್ದಾಳೆ. ಆಕೆಯ ಆರೋಗ್ಯ ದಲ್ಲಿ ಏರುಪೇರು ಆಗಿದ್ದಾಗ ಪೋಷಕರು ಗಮನಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ , ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಆಗ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಸುರೇಶ್ ಕೃತ್ಯವು ಬೆಳಕಿಗೆ ಬಂದಿದೆ. ಇನ್ನೂ ಈ ವಿಷಯ ಬೆಳಕಿಗೆ ಬಂದ ತಕ್ಷಣ ಬಾಲಕಿಯರ ಸಂಬಂಧಿಕರು ಮದುವೆ ಆಗುವಂತೆ ಕೇಳಿದರೆ ಹಣ ಕೊಟ್ಟು ಸೇಟಲ್ ಮೆಂಟ್ ಮಾಡಿಕೊಳ್ಳೋಣ ಎಂದು ಸುರೇಶ್ ಹೇಳಿದ್ದಾನೆ ಎಂದು ಹೇಳಿದ್ದಾರೆ.
ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ. ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.