ಹಗರಿಗಜಾಪುರದಿಂದ ಕೊಟ್ಟೂರು ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಇದನ್ನು ಸರಿಪಡಿಸಬೇಕಾದ ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ಏನು ಗೊತ್ತೇ ಇಲ್ಲ ಅನ್ನುವ ತರ ಇದ್ದಾರೆ.
ಕೊಟ್ಟುರಿನಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರವಿರುವ ಹಗರಿಗಜಾಪುರ ತಲುಪಲು ಅರ್ಧ ಘಂಟೆ ಸಮಯ ತೆಗೆದುಕೊಳ್ಳುತ್ತಿದೆ. ಹದಗೆಟ್ಟಿರುವ ರಸ್ತೆಯಲ್ಲಿ ಎಷ್ಟೋ ಜನರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಇದಾವೆ. ರಸ್ತೆ ಎಲ್ಲಾ ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿದೆ. ರಸ್ತೆಯ ಅಕ್ಕ ಪಕ್ಕ ಎಲ್ಲಿ ನೋಡಿದರೂ ಕಸದ ರಾಶಿಯೇ ಕಾಣಿಸುತ್ತದೆ. ಕಸದಿಂದಲೆ ಅರ್ಧ ರಸ್ತೆಯು ಮುಚ್ಚಿಕೊಂಡು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಕಣ್ಣಿಗೆ ಕಾಣುತ್ತಿದ್ದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನವನ್ನು ತೋರುತ್ತಿದ್ದಾರೆ.
ಈ ರಸ್ತೆಯು ಪ್ರಮುಖವಾಗಿ ಪಟ್ಟಣದಿಂದ ರೈಲ್ವೇ ಸ್ಟೇಷನನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ದಿನಾಲೂ ನೂರಾರು ಜನರು ಸಂಚರಿಸುತ್ತಾರೆ, ರಸ್ತೆ ಸರಿಯಿಲ್ಲದ ಕಾರಣ ಪ್ರಯಾಣದ ಸಮಯ ಹೆಚ್ಚುವುದು ಮಾತ್ರವಲ್ಲದೆ ರಸ್ತೆಯಲ್ಲಿ ಸಂಚರಿಸುವವರು ಸಂಚರಿಸಲು ಅರಸಹಸ ಪಡುವಂಥಾಗಿದೆ.
ಸಾಕಷ್ಟು ತಿಂಗಳುಗಳಿಂದ ಈ ರಸ್ತೆ ಹದಗೆಟ್ಟಿದೆ ಎಂಬುದನ್ನು ರಸ್ತೆ ನೋಡಿದರೆ ತಿಳಿಯಬಹುದು.
ಸ್ಥಳೀಯ ಜನಪ್ರತಿನಿಧಿಗಳು ಸಹ ಈ ವಿಚಾರದ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ. ಜನರಿಗೆ ಸಂಚರಿಸಲು ಸರಿಯಾದ ರೀತಿಯ ರಸ್ತೆಯನ್ನೇ ಮಾಡಿಕೊಡದ ಜನಪ್ರತಿನಿಧಿಗಳು ಇನ್ಯಾವ ರೀತಿ ತಾಲೂಕನ್ನು ಅಭಿವೃದ್ಧಿಪಡಿಸುತ್ತಾರೋ?
ನೂರಾರು ಜನರು ಸಂಚರಿಸುವ ಪ್ರಮುಖ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒತ್ತು ಕೊಡದೆ ಇರುವುದು ಸ್ಥಳೀಯ ಜನರ ಆಕಾಶಕ್ಕೆ ಕಾರಣವಾಗಿದೆ.
ಪ್ರಮುಖ ರಸ್ತೆಯಾಗಿರುವುದರಿಂದ ಸಾರ್ವಜನಿಕರು ಓಡಾಡಲು ಹೆಚ್ಚಾಗಿ ರಸ್ತೆಯನ್ನು ಬಳಸುತ್ತಿದ್ದು ಶೀಘ್ರದಲ್ಲೇ ರಸ್ತೆಯನ್ನು ಸರಿಪಡಿಸಬೇಕಿದೆ.
ವರದಿ:- ಮಣಿಕಂಠ. ಬಿ