ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ಪಿಡಿಒ ಲತಾಭಾಯಿ ಯವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಗ್ರಾಮ ಪಂಚಾಯಿತಿ ಒಟ್ಟು ೧೪ ಸದಸ್ಯರು ಕೂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಜನವರಿ ೨೬ ಶುಕ್ರವಾರದಂದು ಮನವಿ ನೀಡಿದ್ದಾರೆ.
ಪಿಡಿಒ ಯವರು ಸಾರ್ವಜನಿಕರಿಗೆ ಹಾಗೂ ಗ್ರಾ.ಪಂ ಸದಸ್ಯರಿಗೆ ಸರ್ಕಾರದಿಂದ ಬರುವ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಮಾಹಿತಿ ಕೇಳಿದರೆ ಕಾರಣವಿಲ್ಲದ ಮಾಹಿತಿ ನೀಡುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಈಗಾಗಿ ಈ ಭಾಗದ ಜನರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಪಂಚಾಯಿತಿಗೆ ಬರುತ್ತಾರೆ ಬಂದರೂ ಕೂಡ ಗ್ರಾಮದ ಜನರ ಕೆಲಸಗಳನ್ನು ಮಾಡದೇ ತುಂಬಾನೇ ಸತಾಯಿಸುತ್ತಾರೆ ಇವರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತಮಗೆ ಇಚ್ಛೆ ಬಂದಂತೆ ಅಧಿಕಾರ ಮಾಡಲು ಮುಂದಾಗುತ್ತಾರೆ ಇದರಿಂದಾಗಿ ಇಲ್ಲಿನ ಸಾರ್ವಜನಿಕರಿಗೆ ತುಂಬಾನೇ ಕಿರಿ ಕಿರಿ ಉಂಟಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿರುತ್ತಾರೆ.
ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಅಭಿವೃದ್ಧಿಯ ಬಗ್ಗೆ ಮಾತನಾಡಲು ಮುಂದಾದಾಗ ಅವರಿಗೆ ಸರಿಯಾಗಿ ಪ್ರತಿಕ್ರಿಯಿಸದೆ ತಮಗೆ ಇಷ್ಟ ಬಂದಿರುವ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಾರೆ ಪ್ರತಿ ಬಾರಿಯೂ ಇವರ ಜೊತೆ ಚರ್ಚೆ ನಡೆಸಿದರು ಕೂಡ ಯಾವುದೇ ಪ್ರಯೋಜನ ವಾಗಿಲ್ಲ ನಮ್ಮ ಮಾತಿಗೂ ಕಿಂಚಿತ್ತು ಬೆಲೆ ಇಲ್ಲ ಅನ್ನುವ ಹಾಗೇ ವರ್ತಿಸುತ್ತಾರೆ ಇವರಿಂದಾಗಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿಯ ಕೆಲಸಗಳು ನಡೆಯದಂತಾಗಿದೆ.
ಇಂತಹ ಅಧಿಕಾರಿಗಳಿಂದ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನಾನುಕೂಲವೆ ವರೆತು ಅನುಕೂಲಗಳು ಒಂದು ಇಲ್ಲವಾಗಿದೆ ಎಂದು ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಧಿಕಾರಿ ಇಂದ ಇಷ್ಟೆಲ್ಲ ಸಮಸ್ಯೆಗಳಾಗುತ್ತಿದ್ದು ಇಂತವರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ ಆದಕಾರಣ ಇವರನ್ನು ವರ್ಗಾವಣೆ ಮಾಡಿ ಎಂದು ಗ್ರಾಮ ಪಂಚಾಯಿತಿಯ ೧೪ ಸದಸ್ಯರುಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ವರದಿ:- ಮಣಿಕಂಠ. ಬಿ