ವಿಜಯನಗರ: ಜಿಲ್ಲೆ ಹರಪ್ಪನಹಳ್ಳಿ ತಾಲೂಕು ಪುನಭಗಟ್ಟ ಗ್ರಾಮ ಪಂಚಾಯಿತಿಯ ಏಕೆ ಕಾಲೋನಿಯ ದುಸ್ಥಿತಿ ಇದು. ಗ್ರಾಮದ ಎಲ್ಲಾ ನೀರು ರಸ್ತೆಯ ಮೇಲೆ ಹಾಗೂ ಮನೆಗಳ ಮುಂದೆ ಬಂದು ಪರದಾಡುವ ಪರಿಸ್ಥಿತಿ ಎದುರಾಗಿದೆ. ದುರ್ವಾಸನೆಯಿಂದ ಸರಿಯಾಗಿ ದಿನಾಲೂ ಊಟ ಮಾಡಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆ ಇಲ್ಲದ ಕಾರಣ ಡೆಂಗ್ಯೂ,ಮಲೇರಿಯಾ ಎಂಬ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ. ಚರಂಡಿಗಳು ಇಲ್ಲದೆ ಇರುವ ಕಾರಣ ಗ್ರಾಮದ ಜನರ ಬಚ್ಚಲು ನೀರು ರಸ್ತೆಯ ಮೇಲೆಯೇ ಬಿಡುತ್ತಾರೆ. ಹಲವು ಬಾರಿ ಮೌಖಿಕವಾಗಿ ಗ್ರಾಮದ ಜನರು ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಸ್ವಚ್ಛತೆ ಗೊಳಿಸುವ ಬಗ್ಗೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರು ಯಾವುದೇ ಅನುಕೂಲ ಇನ್ನುವರೆಗೂ ಸಾಧ್ಯವಾಗಿಲ್ಲ. ಗ್ರಾಮದ ಸ್ವಚ್ಛತೆಯ ಬಗ್ಗೆ ಅರಿವೇ ಇಲ್ಲದ ಪಿಡಿಓ ಎಸ್ ಮಂಜುನಾಥ ವರದಿ ಕಂಡ ಮೇಲಾದರೂ ಸ್ವಚ್ಛತೆಗೊಳಿಸಲು ಮುಂದಾಗುವರಾ ಇಲ್ಲವಾ ಕಾದು ನೋಡೋಣ.

error: Content is protected !!