ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ದಿ. 24-2-24 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿರುವ ” 75 ನೇ ವರ್ಷದ ಅಮೃತ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ” ವನ್ನು ಮಾನ್ಯಶಾಸಕರು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ನನ್ನನ್ನೂ ಮತ್ತೇ ಮತ್ತೇ ಕರೆಯುವುದರಿಂದ ತಪ್ಪು ಮಾಡುವುದನ್ನು ತಿದ್ದಿಕೊಂಡು ದೇಶದ ಆಸ್ತಿಯಾದ ಸರ್ಕಾರಿ ಸಂಸ್ಥೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ ಎಂದೂ ಹೇಳಿಕೊಳ್ಳಲು ಸಂತೋಷ ಅನಿಸುತ್ತದೆ. ಹುರುಳಿಹಾಳ್ ಗ್ರಾಮ ಸರ್ವ ಜನಾಂಗದ ಶಾಂತಿಯ ತೋಟವಾಗಿ ಗಮನ ಸೆಳೆಯುತ್ತದೆ. ಇದೇ ಗ್ರಾಮದಲ್ಲಿ ನಮ್ಮ ತಂದೆಯವರು ಸ್ಥಾಪಿಸಿದ ಶಾಲೆ ಇದೆ ಅನ್ನುವುದು ಹೆಮ್ಮೆಯ ಸಂಗತಿ . ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಅಭಿವೃದ್ಧಿಗೆ ಒತ್ತುಕೊಡುವುದಾಗಿ ತಿಳಿಸಿದರು. ಬಳಿಕ, ಹೊಸದಾಗಿ ನಿರ್ಮಾಣಗೊಂಡಿರುವ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿದರು. ಹಾಗೆಯೇ ಸಿ. ಆರ್. ಸಿ. ಕಛೇರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆ ಸಿಬ್ಬಂದಿ , ವಿದ್ಯಾರ್ಥಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ : ವಿನಾಯಕ್ ಕೆಎಸ್