ಯಲ್ಲಾಪುರದಲ್ಲಿ ನಡೆದ ಘಟನೆ ಇದಾಗಿದ್ದು ಯಲ್ಲಾಪುರದಿಂದ ಹುನಷೆಟ್ಟಿ ಕೊಪ್ಪದ ಜಾತ್ರೆಗೆ ತೆರಳುವ ಸಂದರ್ಭದಲ್ಲಿ ಉಜ್ವಲ ಪ್ರಕಾಶ್ ಕಕ್ಕೇರಿಕರ್ ಇವರು ತನ್ನ ಅಣ್ಣ ಪ್ರಜ್ವಲ್ ಮತ್ತು ತಂದೆ ಹಾಗೂ ತನ್ನ ಗೆಳೆಯ ವೆಲೆಸ್ಟಿನ್ ಇವರೊಂದಿಗೆ ದಿನಾಂಕ ೨೪ ೨ ೨೦೩೪ ರಂದು ತನ್ನ ಮೋಟಾರ್ ಸೈಕಲ್ ನಲ್ಲಿ ಯಲ್ಲಾಪುರದಿಂದ ಹುಣಶೆಟ್ಟಿಕೊಪ್ಪ ಜಾತ್ರೆಗೆ ಹೋಗುತ್ತಾ ಕುಚಗಾಂವ್ ದಾಟಿ ಸ್ವಲ್ಪ ಮುಂದೆ ಹೋರಟಾಗ ಆರೋಪಿಯು ಮೋಟಾರ್ ಸೈಕಲ್ ನ್ನು ಹಿಂದಿಕ್ಕಿ ಮುಂದೆ ಹೊರಟಾಗ ಉಜ್ವಲನ ಬೈಕ್ ನ್ನು ಹಿಂದೆ ಹಾಕಿ ಕೂಗುತ್ತಾ ಮುಂದೆ ಹೋಗಿದ್ದು ನಂತರ ಉಜ್ವಲ ನು ಅವರನ್ನು ಹಿಂದಿಕ್ಕಿ ಮುಂದಕ್ಕೆ ಹೋಗಿ ಹುಣಶೆಟ್ಟಿಕೊಪ್ಪದ ಚರ್ಚ ಹತ್ತಿರ ತಲುಪಿ ಮೋಟಾರ್ ಸೈಕಲ್ ನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದಾಗ ಇಬ್ಬರು ಆರೋಪಿತರು ಕಾರ್ ನಲ್ಲಿ ಮತ್ತೆ ಇಬ್ಬರು ಮೋಟಾರ್ ಬೈಕ್ ನಲ್ಲಿ ಬಂದು ಉಜ್ವಲ್, ಪ್ರಜ್ವಲ್ , ಪ್ರಕಾಶ್ ಹಾಗೂ ವೆಲೆಸ್ಟಿನ್ ಅವರಿಗೆ ರಾತ್ರೆ ೯ ಗಂಟೆಗೆ ಅಡ್ಡಗಟ್ಟಿ ತಡೆದು ಉಜ್ವಲನ ಅಣ್ಣನಿಗೆ ಹತ್ತಿರದ ಶಾಲೆಯ ಹತ್ತಿರ ಕರೆದುಕೊಂಡು ಹೋಗಿ ಅವಾಚ್ಯವಾಗಿ ಬೈದು ಎಲ್ಲರೂ ಸೇರಿ ಕೈಯಿಂದ ಮೈಮೇಲೆ ಹೊಡೆದರು . ಅವರ ಪೈಕಿ ಸಾಣಾ ಮರಾಠಿ ಎಂಬುವವನು ಪ್ರಜ್ವಲನಿಗೆ ಬಲವಾಗಿ ಕೆನ್ನೆ ಮೇಲೆ ಹೊಡೆದು ಎಳೆದಾಡುತ್ತಿರುವುದನ್ನು ಉಜ್ವಲನು ನೋಡಿ ಅವನು ಮತ್ತು ಅವನ ಗೆಳೆಯ ಬಿಡಿಸಲು ಮುಂದಾದಾಗ ಇವರಿಗೂ ಇದೆ ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ . ನಂತರ ಪ್ರಜ್ವಲನನ್ನು ಆಂಬುಲೆನ್ಸ ಲ್ಲಿ ಯಲ್ಲಾಪುರ ಸರ್ಕಾರಿ ಆಸ್ಪತ್ತ್ರೆಗೆ ಕರೆದುಕೊಂಡು ಬಂದಾಗ ಅವನನ್ನು ಪರೀಕ್ಷಿಸಿದ. ವೈದ್ಯರು ಪ್ರಜ್ವಲನು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ .ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ವರದಿ :ಶ್ರೀಪಾದ್ ಎಸ್ ಏಚ್