ಬಸ್ ನಿಲ್ಲಿಸದೆ ಹೋದ ಕಾರಣ ಗ್ರಾಮದಲ್ಲಿ ಬಸ್ ನಿಲ್ಲಿಸಿ ಗ್ರಾಮಸ್ಥರು ಕೇಳಿಕೊಂಡಿರುತ್ತಾರೆ ಇದರ ಪರಿಣಾಮ ಬಸ್ ಚಾಲಕ ಗ್ರಾಮಸ್ಥರ ಮೇಲೆ ಆಕ್ರೋಶಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.
ಬಸ್ ಗ್ರಾಮದಲ್ಲಿ ನಿಲ್ಲಿಸದೆ ಇರುವ ಕಾರಣ ಗ್ರಾಮಸ್ಥರು ಚಾಲಕನ ಬಳಿ ಪ್ರಶ್ನಿಸಿ ನಿಲ್ಲಿಸುವಂತೆ ಕೇಳಿಕೊಂಡಿರುತ್ತಾರೆ ತೀವ್ರ ಆಕ್ರೋಶಗೊಂಡ ಚಾಲಕ ಗ್ರಾಮಸ್ಥರಿಗೆ ಬಯ್ಯುವುದಲ್ಲದೆ ನಿಲ್ಲಿಸಲು ಸಾಧ್ಯವಿಲ್ಲ ಏನು ಮಾಡುತ್ತೀರಾ ಮಾಡಿಕೊಳ್ಳಿ ಎಂದು ಮನಸ್ಸು ಬಂದಂತೆಲ್ಲ ವರ್ತಿಸಿದ್ದಾನೆ.
ಈ ಸನ್ನಿವೇಶವನ್ನು ಗ್ರಾಮಸ್ಥರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.