ಯಲ್ಲಾಪುರದಲ್ಲಿ ನಡೆದ ಘಟನೆ ಇದಾಗಿದ್ದು ರಾಮಕೃಷ್ಣ ಸುಬ್ರಾಯ ಭಟ್ ಚಂದಗುಳಿ ಇವರ ಮಗಳು ತೇಜ ಎನ್ನುವವಳು ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ,ಈಕೆಯೂ ತನ್ನ. ಮನೆ ಯಲ್ಲಾಪುರದ ಮನೆಗೆ ಬಂದಿದ್ದು ದೀ 20/12/2023 ರಂದು ವಾಪಸ್ ಹುಬ್ಬಳಿಯ ತನ್ನ ಕಂಪನಿಗೆ ಕೆಲಸಕ್ಕೆ ಹೋಗುವುದಾಗಿ ಹೊರಟಿದ್ದು ಸರಿ ಸುಮಾರು 9 ,30 ಗಂಟೆಗೆ ಯಲ್ಲಾಪುರದಿಂದ ಹೋಗುತ್ತಾಳೆ,ಆದರೆ ತೇಜ ರಾಮಕೃಷ್ಣ ಈಕೆಯೂ ತಾನು ಮಾಡುವ ಕೆಲಸದ ಸ್ಥಳಕ್ಕೂ ತೆರಳದೆ ಸಂಬಂಧಿಕರ ಮನೆಗೆ ಕೂಡ ತೆರಳದೆ ಕಾಣೆಯಾಗಿದ್ದು ತಿಳಿದು ಬಂದಿದ್ದು ಎಲ್ಲ ಕಡೆಯೂ ವಿಚಾರಣೆ ನಡೆಸಿ ಕೂಡ ಎಲ್ಲಿಯೋ ಕಂಡು ಬರುವುದಿಲ್ಲ. ಈ ಕುರಿತು ತೇಜ ಕಾಣೆಯಾಗಿರಬಹುದು ಎಂದು ತೇಜ ತಂದೆ ರಾಮಕೃಷ್ಣ ಭಟ್ ರವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಈ ಕುರಿತು ತೇಜ ಕಂಡು ಬಂದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ನಂ 08419,261133 ಮಾಹಿತಿ ನೀಡಬಹುದಾಗಿದೆ, ಎತ್ತರ ,5.2 ಫೀಟ್, ಗೋದಿ ಬಣ್ಣ ಸಾಧಾರಣ ಮೈಕಟ್ಟು ದುಂಡನೆಯ ಮುಖ ಹೊಂದಿರುತ್ತಾಳೆ.
ವರದಿ: ಶ್ರೀಪಾದ್ ಎಸ್ ಏಚ್