ಕಡೂರು ತಾಲೂಕ್ ಸಿಂಗಟಗೆರೆ ಹೋಬಳಿಯ ಕೆರೆಸಂತೆ ಗ್ರಾಮ ಪಂಚಾಯಿತಿಗೆ ಸೇರುವ ಅಂಚೆ ಚೋಮನಹಳ್ಳಿ ಗ್ರಾಮದಲ್ಲಿ ಇರುವ ಮಧ್ಯದ ಅಂಗಡಿಯನ್ನು ತೆರವು ಗೊಳಿಸಲು ಅಂಚೆಚೋಮನಹಳ್ಳಿ ಗ್ರಾಮದ ಮಹಿಳೆಯರು ತಮ್ಮ ಗ್ರಾಮದಲ್ಲಿ ಇರುವ ಚಂದನ ವೈನ್ಸ್ ಬಳಿ ಪ್ರತಿಭಟನೆ ಮಾಡಿದರು.
ಈ ಅಂಚೆಚೋಮನಹಳ್ಳಿಯಲ್ಲಿ ಇರುವ ಈ ಚಂದನ ವೈನ್ಸ್ ಮದ್ಯದ ಅಂಗಡಿ ಸುಮಾರು ವರ್ಷ ಗಳಿಂದಇದ್ದು ಈ ಅಂಚೆಚೋಮನಹಳ್ಳಿಯಲ್ಲಿ ವಾಸಿಸಸುವ ದಲಿತರು, ಮಧ್ಯಮ ವರ್ಗದ ಜನರು ಕೂಲಿ ಕೆಲಸಕ್ಕೆ ಹೋಗಿ ಸಂಜೆ ತಾವು ದುಡಿದ ಪೂರ್ತಿ ಹಣವನ್ನು ಮದ್ಯಪಾನ ಸೇವಿಸುವುದಕ್ಕೆ ಬಳಸಿ, ತಮ್ಮ ಕುಟುಂಬ ಮತ್ತು ತಮ್ಮ ಅರೋಗ್ಯ ಹಾಳು ಮಾಡಿ ಕೊಳ್ಳುತ್ತಿದ್ದಾರೆ. ಕೆಲವರು ಅತಿಯಾಗಿ ಮದ್ಯಪಾನ ಸೇವೆಸಿ ತಮ್ಮ ಜೀವ ಕಳೆದು ಕೊಂಡಿರುವ ಘಟನೆ ಈ ಅಂಚೆಚೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕಾರಣದಿಂದಾಗಿ ಈ ಗ್ರಾಮದ ಮಹಿಳೆಯರು ಮದ್ಯದ ಅಂಗಡಿ ತೆರವು ಮಾಡಬೇಕೆಂದು ಪ್ರತಿಭಟನೆ ಮಾಡಿದ್ದಾರೆ.