ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿಯ ಮುಂದಗಡೆ ಇರುವ ರಸ್ತೆಯ ದುಸ್ಥಿತಿ ಇದು.ಪ್ರತಿದಿನ ಗ್ರಾಮದ ಜನರು ಇದೇ ಪರಿಸ್ಥಿತಿ ಅನುಭವಿಸಬೇಕು. ಶಾಲೆಗೆ ವಿದ್ಯಾರ್ಥಿಗಳು ಹೋಗಲು ಹಾಗೂ ಗ್ರಾಮದ ಜನರು ಓಡಾಡಲು ಮುಖ್ಯರಸ್ತೆಯಾಗಿರುವ ಈ ರಸ್ತೆಯೇ ಈ ರೀತಿಯಾಗಿದ್ದು ಸುಮಾರು ದಿನಗಳಿಂದ ಇದೇ ಪರಿಸ್ಥಿತಿ ಅನುಭವಿಸುತಿದ್ದು. ಇದರ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸದೇ ಇರುವುದು ನಾಚಿಕೆ ಗೇಡಿನ ಸಂಗತಿ.ಗ್ರಾಮದಲ್ಲಿ ಪಂಚಾಯತಿ ಇದ್ದು ಇಲ್ಲದಂತಾಗಿದೆ. ಗ್ರಾಮದ ಎಲ್ಲಾ ನೀರು ರಸ್ತೆಯ ಮೇಲೆ ಹಾಗೂ ಮನೆಗಳ ಮುಂದೆ ಬಂದು ಪರದಾಡುವ ಪರಿಸ್ಥಿತಿ ಎದುರಾಗಿದೆ. ದುರ್ವಾಸನೆಯಿಂದ ಸರಿಯಾಗಿ ದಿನಾಲೂ ಊಟ ಮಾಡಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆ ಇಲ್ಲದ ಕಾರಣ ಡೆಂಗ್ಯೂ,ಮಲೇರಿಯಾ ಎಂಬ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುವ ಸಾದ್ಯತೆ ಹೆಚ್ಚಿದೆ. ಚರಂಡಿಗಳು ಇಲ್ಲದೆ ಇರುವ ಕಾರಣ ಗ್ರಾಮದ ಜನರ ಬಚ್ಚಲು ನೀರು ರಸ್ತೆಯ ಮೇಲೆಯೇ ಬಿಡುತ್ತಾರೆ. ಹಲವು ಬಾರಿ ಮೌಖಿಕವಾಗಿ ಗ್ರಾಮದ ಜನರು ಪಂಚಾಯತಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಸ್ವಚ್ಛತೆಯ ಬಗ್ಗೆ ಅರಿವೇ ಇಲ್ಲದ ಪಿಡಿಓ ಶಿವಾನಂದ ತೊಳಾನುರ ಹಾಗೂ ಕಾರ್ಯದರ್ಶಿ ನಿರಂಜನಪ್ಪ ದಳವಾಯಿ ಯಾವ ರೀತಿ ಕೆಲಸ ಮಾಡ್ತಾ ಇದ್ದಾರೆ ಎಂಬುದು ತಿಳಿಯದಾಗಿದೆ. ವರದಿ ಕಂಡ ಮೇಲಾದರೂ ಗ್ರಾಮದ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವರಾ ಇಲ್ಲವಾ ಕಾದು ನೋಡೋಣ.
ವರದಿ: ಸಂಗಪ್ಪ ಚಲವಾದಿ