ಮುಂಡಗೋಡ: ಜಗದ್ಗುರು ರೇಣುಕಾಚಾರ್ಯ ಜಯಂತಿಯ ಪ್ರಯುಕ್ತ ಹೊರಟಿರುವ ಧರ್ಮ ಜಾಗೃತಿ ಯಾತ್ರೆಯು ಇಂದು ಮುಂಡಗೋಡ ತಾಲೂಕಿನ ಹುನುಗುಂದ ಗ್ರಾಮಕ್ಕೆ ಆಗಮಿಸಿತು..
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಪುಟ್ಟನಹಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಹೊರಟ ಈ ರಥಯಾತ್ರೆಯು ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹುನಗುಂದ ಗ್ರಾಮಕ್ಕೆ ತಲುಪಿತು. ರಥಯಾತ್ರೆಯನ್ನು ಭಕ್ತಾದಿಗಳು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಹುನಗುಂದ ಗ್ರಾಮದ ಶ್ರೀ ವೇದಮೂರ್ತಿ ಬಸಯ್ಯ ಶಾಸ್ತ್ರಿಗಳು ತೋಟಯ್ಯನವರಮಠ ,ಶ್ರೀ ವೀರಯ್ಯ ಹಿರೇಮಠ ,ಶ್ರೀ ಈಶ್ವರಗೌಡ ಅರಳಿ ಹೊಂಡ ,ಶ್ರೀ ಶೇಖಯ್ಯ ತೋಟಯ್ಯನವರಮಠ, ಶ್ರೀ ಮಾದೇವಪ್ಪ ಹಡಪದ ಶ್ರೀ ಶಂಕ್ರಣ್ಣ ನುಲವಿ ಉಪಸ್ಥಿತರಿದ್ದರು.

ವರದಿ: ಮಂಜುನಾಥ ಹರಿಜನ.

error: Content is protected !!