ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ ,ಹಲವಾರು ಕಡೆಯಿಂದ ಬೇರೆ ತಾಲೂಕು ಜಿಲ್ಲೆಯಿಂದ ಹಲವಾರು ಭಕ್ತ ಸಮೂಹವೆ ಹರಿದು ಬರುತ್ತಿದೆ 19 ರಿಂದ ,ಶುರುವಾದ ಶಿರಸಿಯ ಶ್ರೀ ಮಾರಿಕಾಂಬೆ ಜಾತ್ರೆ ರಾಜ್ಯದ ಅತ್ಯಂತ ದೊಡ್ಡ ಜಾತ್ರೆಯಾಗಿದ್ದು ಜಾತ್ರೆಯಲ್ಲಿ ಕಳ್ಳರ ಕೈ ಚಲಕವು ಅಷ್ಟೇ ಜೋರಾಗಿದೆ ,ಜಾತ್ರೆಯಲ್ಲಿ ಜನರ ಸಮೂಹದಲ್ಲಿ ಯಾರಿಗೂ ತಿಳಿಯದ ಹಾಗೆ ಚೈನ್ ಸ್ನ್ಯಾಚ್ ಮತ್ತು ಪಿಕ್ ಪಾಕೆಟ್ ಮಾಡಿದ ಇಬ್ಬರ ಆರೋಪಿಗಳ ಹೆಡೆಮುರಿ ಕಟ್ಟಿದ ಶಿರಸಿ ಪೋಲಿಸರು. ಆರೋಪಿಗಳಾದ
ಮಹಾರಾಷ್ಟ್ರದ ಮೂಲದ ತುಷಾರ ಗಾಯಕವಾಡ್ ಮತ್ತು ರಾಹುಲ್ ವಾವಳ್ಳಿ ಆರೋಪಿಗಳು.
ಇನ್ನಿಬ್ಬರು ಅರೋಪಿಗಳ ಬಂಧನಕ್ಕಾಗಿ ಪೋಲಿಸರು ಬಲೆ ಬಿಸಿದ್ದು ಪೋಲಿಸರ ಕಾರ್ಯಚರಣೆ ಬಗ್ಗೆ ಸಾರ್ವಜನಿಕರು ಪ್ರಶಂಸಿದ್ದಾರೆ ಎನ್ನಲಾಗಿದೆ .
ವರದಿ: ಶ್ರೀಪಾದ್ ಎಸ್ ಏಚ್