ಗುಬ್ಬಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾಕ್ಟರ್ ನಾಗಲಕ್ಷ್ಮಿ. ಹಲವಾರು ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದು ರೋಗಿಗಳ ಹಲವಾರು ತೊಂದರೆಗಳನ್ನು ಆಲಿಸಿದರು.
ಸಾರ್ವಜನಿಕರುಗಳಿಂದ ಬಂದ ದೂರುಗಳಾದ ಕೆಲವು ವೈದ್ಯ ಅಧಿಕಾರಿಗಳು ಸಿಬ್ಬಂದಿಗಳು ಚಿಕಿತ್ಸೆಗಾಗಿ ರೋಗಿಗಳಿಂದ ಹಣವನ್ನು ಪಡೆಯುತ್ತಿರುವುದು, ಬೇಕಾಬಿಟ್ಟಿ ಚಿಕಿತ್ಸೆ ನೀಡುತ್ತಿರುವುದು, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ ತೋರುತ್ತಿರುವ ಬಗ್ಗೆ ಹಾಗೂ ಅದೇ ರೀತಿ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಬಿಳೇಕಲ್ ಪಾಳ್ಯದ ತಿಮ್ಮರಾಜನ ಪತ್ನಿ ರೇಣುಕಾ 29 ವರ್ಷ ಸಂತಾನ ಹರಣ ಚಿಕಿತ್ಸೆಗೆಂದು ಬಂದಿದ್ದು ಚಿಕಿತ್ಸೆಗೆ 5000 ಹಣವನ್ನು ಕೇಳಿದ್ದು. ನಮಗೆ ಜೀವನ ಮಾಡೋದಕ್ಕೆ ತುಂಬಾ ಕಷ್ಟವಿದೆ ಅದಕ್ಕೆ ಸಾರ್ವಜನಿಕ ಆಸ್ಪತ್ರೆಗೆ ಬರುವುದು ನಮ್ಮಂತ ಬಡವರು. ನಮ್ಮ ಮೇಲಿನ ಕೋಪಕ್ಕೆ ಏನೋ ಗೊತ್ತಿಲ ಅರಿವಳಿಕೆ(Anesthesia) ನೀಡದೆ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದು ನನಗೆ ತುಂಬಾ ನೋವಾಗಿದೆ ಎಂದು ರೇಣುಕಾ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂಬಂಧ ಪಟ್ಟಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರನ್ನು ಸಲ್ಲಿಸಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಯಾವುದೇ ಪ್ರಯೋಜನವಾಗಿಲ್ಲ ಎಂದು ರೇಣುಕಾ ಕುಟುಂಬದವರು ಇದೇ ಸಮಯದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.