ಉತ್ತರಕನ್ನಡ ಜಿಲ್ಲೆಯಲ್ಲಿ ಬರುವ ಯಲ್ಲಾಪುರ ಮುಂಡಗೋಡ ,ಶಿರಸಿಗಳಲ್ಲಿ ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ ,ಅಷ್ಟೇ ಭರ್ಜರಿಯಾಗಿ ಅಕ್ರಮವಾಗಿ ಸಾಗಿಸುವ ಚುನಾವಣೆ ಪ್ರಯುಕ್ತ ಹಲವು ರೀತಿಯಲ್ಲಿ ಜನರಿಗೆ ಹಂಚಲು ವಸ್ತುಗಳು ಮತ್ತು ಹಣಗಳು ಸಾಗಿಸುವುದು ಸಾಮಾನ್ಯವಾಗಿದೆ, ಅವುಗಳನ್ನು ತಡೆಗಟ್ಟಲು ಚುನಾವಣಾ ಆಯೋಗದವರು ಆಯಾ ಜಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು ನಿನ್ನೆ ಕಿರವತ್ತಿ ಚೆಕ್ ಪೋಸ್ಟ್ ನಲ್ಲಿ ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ,bಅರವಿಂದ ಬೇವಿನಗಿಡದ ,ಎಸ್ ಎಸ್ ಟಿ ತಂಡದ ಅಧಿಕಾರಿ ಇವರು ಉಲ್ಲೇಖಿತ ಪತ್ರದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಚೆಕ್ ಪೋಸ್ಟ್ ನಲ್ಲಿ ದಿನಾಂಕ 28 – 03 – 2024 ರಂದು ಮದ್ಯಾನ 03 ಗಂಟೆಯ ಸುಮಾರು ಶ್ರೀ ವಿಶ್ವನಾಥ ಲೊಕ್ಕಯ್ಯ ಶೆಟ್ಟಿ ಇವರು ಪ್ರಯಾಣಿಸುತ್ತಿದ್ದ ವಾಹನ ಸಂಖ್ಯೆ MH 14 JR 9755 ವಾಹನವು ಪುಣೆಯಿಂದ ಉಡುಪಿಗೆ ಹೋಗುವ ಸಮಯದಲ್ಲಿ ಸದರಿ ವಾಹನವನ್ನು ಕರ್ತವ್ಯ ನಿರತ ಎಸ್ ಎಸ್ ಟಿ ತಂಡದವರು ಮತ್ತು ಪೊಲೀಸ್ ಸಿಬ್ಬಂದಿಗಳು ತಪಾಸಣೆ ನಡೆಸಲಾಗಿ 1.20.000-00 ರೂ ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿದ್ದು ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಎಸ್ ಎಸ್ ಟಿ ತಂಡದವರು ಪಂಚನಾಮೆಯೊಂದಿಗೆ ಉಲ್ಲೇಖಿಸಿದ್ದಾರೆ .ಈ ಹಣವನ್ನು ಯಲ್ಲಾಪುರ ಉಪಖಜಾನೆಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯನ್ನು ಮಾನ್ಯರ ಅವಗಾಹನೆಗಾಗಿ ಗೌರವ ಪೂರ್ವಕವಾಗಿ ಸಲ್ಲಿಸಿದೆ .
ವರದಿ: ಶ್ರೀಪಾದ್ ಎಸ್ ಏಚ್