ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕು ಬಂಟನೂರ ಗ್ರಾಮದಲ್ಲಿ ನೀರಿಗಾಗಿ ಪರದಾಡುತ್ತಿರುವ ಜನರು ಮತ್ತು ಮೂಖ ಪ್ರಾಣಿಗಳು ಗೋಳಾಟ ಕೇಳೋರು ಯಾರು ಇಲ್ಲ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ನಾರಾಯಣಪುರ ಬಸವಸಾಗರ ಡ್ಯಾಂ ನಿಂದ ಕೃಷ್ಣಾ ಮೇಲ್ದಂಡೆ ಎಡದಂಡೆ ಕಾಲುವೆಯಿಂದ ಅಗ್ನಿ ಗ್ರಾಮದ ಹತ್ತಿರ ಕೆರಿಗೆ ನೀರು ಲಿಫ್ಟ್ ಮಾಡಿ ಅಲ್ಲಿಂದ ಬಹು ಹಳ್ಳಿಗಳಿಗೆ ಶುದ್ಧ ಕುಡಿಯೋ ನೀರು ಎಂದು 16 ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಾರೆ. ಈ ನೀರು ಜನರಿಗೆ ಕುಡಿಯೋಕೆ ಯಾವದೇ ರೀತಿ ನೀರು ಶುದ್ಧೀಕರಣ ಆಗಿವರುದಿಲ್ಲ. ಅದರಲ್ಲಿ ಈ ಹಳ್ಳಿಗಳ ಜನರಿಗೆ ನೀರು ಬಿಡುದು ವಾರದಲ್ಲಿ ಒಂದೇ ಒಂದು ದಿನ ಮಾತ್ರ ಅದರಲ್ಲೂ ಆ ಕೆರಿಯಲ್ಲಿ ಒಂದು ಪಂಪ್ ಮೊಟರ್ ಇದ್ದು ಅದು ಏನಾದರೂ ಕೆಟ್ಟರೆ ಅದನ್ನು ರಿಪೇರಿ ಮಾಡಲು ಬಾಗಲಕೋಟೆ ಯಿಂದ ಮೋಟರ್ ರಿಪೇರಿ ಮಾಡುವರು ಬರಬೇಕು ಅವರು ಬಂದು ಮೋಟರ್ ರಿಪೇರಿ ಮಾಡಿ ನೀರು ಬಿಡಬೇಕಾದರೆ ಕನಿಷ್ಠ 15 ರಿಂದ 20 ದಿನಗಳು ಕಾಲ ಬೇಕು ಅದು ಆದಮೇಲೆ ಇಲ್ಲನ ಗುತ್ತಿಗೆದಾರರು ಆ ಕೆರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ಕೊಟ್ಟಿಲ್ಲ ಎಂದು ಬಂಟನೂರ ಗ್ರಾಮಕ್ಕೆ ನೀರು ಬಿಡದೆ 9 ದಿನಗಳು ಆಯಿತು, ಈ ಗ್ರಾಮದಲ್ಲಿ ನೀರು ಯಾವಾಗ ಬಿಟ್ಟರು ಅಥವಾ ಬಿಡದೆ ಇದ್ದರೂ ಕೇಳುವರು ಯಾರು ಇಲ್ಲ .ಇನ್ನಾದರೂ ಜನರ ಕಷ್ಟಕ್ಕೆ ಮೇಲಾಧಿಕಾರಿಗಳೂ ಮುಂದೆ ಬಂದು ಬಂಟನೂರ ಗ್ರಾಮದ ಜನರಿಗೆ ನೀರು ಬಿಡುವ ಕೆಲಸ ಮಾಡಬೇಕಿದೆ.
ವರದಿ: ವೆಂಕಾರೆಡ್ಡಿ

error: Content is protected !!