ಪುತ್ತೂರಿನ ವಿವಾಹಿತ ಮಹಿಳೆಯೊಬ್ಬರು ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಇದು ಲವ್‌ಜಿಹಾದ್‌ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.
ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್‌ ಭಟ್‌ ಅವರ ಪತ್ನಿ ಪ್ರತಿಮಾ ಭಟ್‌ ಅವರು ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ ಪುತ್ತೂರಿನಲ್ಲಿ ಆಯಂಬುಲೆನ್ಸ್‌ ಚಾಲಕ ಸಿರಾಜುದ್ದೀನ್‌ ಜತೆ ಪರಾರಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಮಹಿಳೆ ಪ್ರತಿಮಾ ಭಟ್‌ ಅವರ ಪತಿ ಸುರೇಶ್‌ ಭಟ್‌ ಪತ್ನಿಯನ್ನು ಪ್ರಶ್ನಿಸಲು ತೆರಳಿದ್ದ ವೇಳೆ ಮಹಿಳೆಯ ಪತಿ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೈದು ಬೆದರಿಕೆಯೊಡ್ಡಿದ ಘಟನೆ ಬೈಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!