ಶವಸಂಸ್ಕಾರಕ್ಕಾಗಿ ಜಾಗ ನೀಡದ ಕಾರಣ ಶವವನ್ನು ನಡು ರಸ್ತೆಯಲ್ಲಿ ಅಂತ್ಯಸಂಸ್ಕಾರ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗೋವನಕೊಪ್ಪ ಗ್ರಾಮದ ಬಸಪ್ಪ ಅಂದಾಕಾರ್ ಎಂಬುವವರು ಬುಧವಾರ ದಿನ ನಿಧನರಾಗಿದ್ದರು ಅವರ ಅಂತ್ಯಸಂಸ್ಕಾರಕ್ಕೆ ಜಮೀನಿನ ಮಾಲಕರು ಜಾಗ ನೀಡದ ಕಾರಣ ಗ್ರಾಮಸ್ಥರು ನವಲಗುಂದ ರಸ್ತೆಯಲ್ಲಿ ಆ ಶವವನ್ನು ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಗೋವನಕಪ್ಪ ಗ್ರಾಮದ ಜನರು ಗುರುವಾರ ಈ ಕುರಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಶಿವು ಹುಬ್ಬಳ್ಳಿ.