ಹಳೆಯ ವೈಶ್ಯ ಮೇಲೆ ಹಿನ್ನೆಲೆಯಲ್ಲಿ ರೌಡಿ ಗ್ಯಾಂಗ್ ಒಂದು ಮತ್ತೊಬ್ಬ ರೌಡಿ ಮೇಲೆ ಹಲ್ಲೆ ಮಾಡಿ ತೀವ್ರ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಟೂರು ರೋಡ್ ನಲ್ಲಿ ನಡೆದಿದೆ.
ಈ ಘಟನೆಯಲ್ಲಿ ರೌಡಿಶೀಟರ್ ಡೇವಿಡ್ ಯಮಾರ್ಥಿ ಹಲ್ಲೆಗೊಳಗಾಗಿದ್ದು ದಾವೂದ್ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಹುಬ್ಬಳ್ಳಿ ಉಪ ಕಾರಾಗೃಹದಲ್ಲಿದ್ದ ತಂಡಗಳ ಸದಸ್ಯರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು ಕಳೆದ ರವಿವಾರ ರಾತ್ರಿ 8 ರಿಂದ 10 ಜನರ ತಂಡ ಡೆವಿಡ್ ಮೇಲೆ ಹಲ್ಲೆ ಮಾಡಿದ್ದಾರೆ
ಈ ಘಟನೆಯಲ್ಲಿ ಡೇವಿಡ್ ತಲೆಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ ಇನ್ನು ಈ ಗಲಾಟೆ ವಿಷಯ ತಿಳಿದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಡೇವಿಡ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾದಾಗ ಡೇವಿಡ್ ನಾನು ಚಿಕಿತ್ಸೆ ಪಡೆಯುವುದಿಲ್ಲ ಎಂದು ಕೂಗಾಡಿದ್ದಾನೆ ಅಲ್ಲದೇ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಕಿರಿಕ್ ಮಾಡಿಕೊಂಡು ಆಸ್ಪತ್ರೆಯ ಗಾಜು ಪೀಠೋಪಕರಣಗಳನ್ನು ದ್ವಂಸ ಮಾಡಿದ್ದಾನೆ ಆ ಸಮಯದಲ್ಲಿ ಪೊಲೀಸರು ಡೇವಿಡ್ ನನ್ನು ತಡೆಯಲು ಮುಂದಾದಾಗ ಡೇವಿಡ್ ಅವಾಜ್ ಹಾಕಲು ಮುಂದಾಗಿದ್ದಾನೆ ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನು ಮತ್ತು ಸೂವ್ಯೆವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರರವರು ಹುಬ್ಬಳ್ಳಿ ನಗರದಲ್ಲಿದ್ದಾಗಲೇ ಇಂತಹ ಘಟನೆಗಳು ನಡೆದಿರುವುದು ನಿಜಕ್ಕೂ ವಿಪರ್ಯಾಸ.