ಬನವಾಸಿಯ ವರದಾ ನದಿಯ ನೀರಿನ ರಭಸಕ್ಕೆ ಸಾವಿರಾರು ಎಕರೆ ಪ್ರದೇಶ ಜಲಾವೃತವಾಗಿದೆ, ಇಷ್ಟು ದಿನ ಜಿಲ್ಲೆಯ ಗಟ್ಟದ ಕೆಳಭಾಗದಲ್ಲಿ ಮಳೆಯು ಅವಾಂತರ ಸೃಸ್ಟಿಯಾದರೆ ಈಗ ಗಟ್ಟದ ಮೇಲಿನ ತಾಲುಕು ಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳ ಕೆರೆಗಳು ನದಿಗಳು ತುಂಬಿ ತುಳುಕುತ್ತಿದೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಬಾರಿ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿದೆ, ಗಟ್ಟದ ಕೆಳಗಿನ ಪ್ರದೇಶಗಳಲ್ಲಿ ತುಂಬಾ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿದೆ,ಹಾಗೂ ಗುಡ್ಡ ಕುಸಿದು ಶಿರಸಿ ಕುಮಟಾ ರಸ್ತೆ ಮಾರ್ಗ ಬಂದಾಗಿದ್ದು ಹಾಗೂ ಶೀರೂರು ಎಂಬಲ್ಲಿ ಗುಡ್ಡ ಕುಸಿದು ಸುಮಾರು ಜನರ ಪ್ರಾಣ ಮಣ್ಣಿನಡಿ ಮತ್ತು ಜಲಸಮಾಧಿ ಆಗಿದ್ದಾರೆ, ಇನ್ನು ಗಟ್ಟದ ಕೆಳಭಾಗದಲ್ಲಿ ಇಂತಹ ಘಟನೆ ನಡೆದಿದೆ,ಗಟ್ಟದ ಮೇಲಿನ ಪ್ರದೇಶದಲ್ಲಿ ಕೂಡ ಸಣ್ಣ ಪುಟ್ಟ ಸಮಸ್ಯೆ ಉಂಟಾಗುತ್ತಿದೆ ,ಶಿರಸಿಯಲ್ಲಿ ಬರುವ ಬನವಾಸಿಯ ಜೀವನದಿ ಎಂದೇ ಕರೆಯುತ್ತಾರೆ ಈ ವರದ ನದಿಯನ್ನು ಈ ನದಿಯು ಈಗ ಅಪಾರ ಮಟ್ಟದ ಮಳೆಯಿಂದ ಉಕ್ಕಿ ಹರಿಯುತ್ತಿದ್ದು, ಈಗಾಗಲೇ ಸಾಕಷ್ಟು ಕೃಷಿ ಭೂಮಿ ಮುಳುಗಡೆ ಆಗಿದ್ದು ಬನವಾಸಿಯ ಮೊಗವಲ್ಲಿ,ಭಾಷಿ ,ಅಜ್ಜರಣಿ, ತಿಗಣೆ ಗ್ರಾಮಗಳಲ್ಲಿ ನದಿಯ ನೀರು ನುಗ್ಗಿ ಬತ್ತ ಅನಾನಸ್ ಅಡಿಕೆ ಬಾಳೆ ಶುಂಠಿ ಎಲ್ಲ ಬೆಳೆಗಳಿಗೆ ನೀರು ನುಗ್ಗಿದ ಪರಿಣಾಮ ಬೇಳೆ ನಾಶವಾಗಿದ್ದು ರೈತರೂ ನಷ್ಟ ಅನುಭವಿಸು ವಂತಾಗಿದೆ ,ಹೀಗೆಯೇ ಇನ್ನು ಮಳೆ ಮುಂದು ವರೆದರೆ ಇನ್ನು ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.
ವರದಿ: ಶ್ರೀಪಾದ್ ಎಸ್.