ಉತ್ತರಕನ್ನಡ ಜಿಲ್ಲೆಯ ಶೀರೂರು ಘಟನೆ ಕುರಿತು ಕೇಂದ್ರ ಸಚಿವರು ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬಂದು ಯಲ್ಲಾಪುರಕ್ಕೆ ಬೇಟಿ ನೀಡಿ ನಂತರ ಶಿರೂರಿಗೆ ತೆರಳಿದ್ದಾರೆ, ಜಿಲ್ಲೆಯ ಸಂಸದರು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾರಣಾಂತರಗಳಿಂದ ಎಚ್ ಡಿ ಕುಮಾರಸ್ವಾಮಿ ಒಟ್ಟಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ, ಸಂಸದರು ಸಚಿವರ ಒಟ್ಟಿಗೆ ನಿರಂತರ ಆಗುವ ಸಮಸ್ಯೆ ಕುರಿತು ಫೋನಿನ ಸಂಪರ್ಕದಲ್ಲಿದ್ದು ಮಾಹಿತಿ ನೀಡಲಾಗುತ್ತಿದೆ,ಇನ್ನು ಸಚಿವರು ಕುಮಾರಸ್ವಾಮಿಯವರು ಯಲ್ಲಾಪುರಕ್ಕೆ ಬೇಟಿ ನೀಡಿ ನಂತರ ಉಳುವರೆಗೆ ತೆರಳಿ ಅಲ್ಲಿನ ಪ್ರಕೃತಿ ವಿಕೋಪ ಹಾಗೂ ಅಲ್ಲಿನ ಗುಡ್ಡ ಕುಸಿದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಅಲ್ಲಿನ ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ ,ಇಲ್ಲಿನ ಸ್ಥಳದಲ್ಲಿ ಇನ್ನಷ್ಟು ಗುಡ್ಡ ಕುಸಿಯುವ ಹಂತದಲ್ಲಿವೆ ಎಂದು ತಿಳಿದು ಬಂದಿದೆ, ಮತ್ತು ಘಟನೆಯಲ್ಲಿ ಮೃತರದವರ ಕುಟುಂಬಕ್ಕೆ ಸಾಂತ್ವನ ಹೇಳಿದರು, ಈ ಸಮಯದಲ್ಲಿ ಜೇಡಿ ಎಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು ಇಲ್ಲಿನ ಸಮಸ್ಯೆ ಬಗ್ಗೆ ವಿವರಣೆ ನೀಡಿ ಐ ಆರ್ ಬಿ ಅವೈಜ್ಞಾನಿಕ ಕಾಮಗಾರಿಯ ಈ ದುರಂತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು, ಈ ಕುರಿತು ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ವರದಿ: ಶ್ರೀಪಾದ್ ಎಸ್