ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಮುಡಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ತುಂಬಾ ಸಂಕಷ್ಟವಾಗಿದೆ ಯಾಕೆಂದರೆ ಚರಂಡಿಗಳಲ್ಲಿ ಸಾಮಾನ್ಯವಾಗಿ ನೀರು ಹೋಗಲು ಇರುತ್ತದೆ ಆದರೆ ಇಲ್ಲಿ ನೀರು ಹೋಗುತ್ತಿಲ್ಲ ಅದರಲ್ಲಿ ಮಣ್ಣು, ಕಸ, ಪ್ಲಾಸ್ಟಿಕ್ ಹಾಗೂ ಪೊದೆಗಳು ಸಹ ಬೆಳೆದುಕೊಂಡಿದೆ. ನೀರು ಹೋಗಲು ಜಾಗವಿಲ್ಲದೆ ಅಲ್ಲೇ ನಿಲುತಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಚರಂಡಿಗಳಲ್ಲಿ ನೀರು ನಿತ್ತು ಕೊಳೆಯುತ್ತಿದೆ ಆ ನೀರು ನಿಂತಿರುವ ಜಾಗದಿಂದಲೇ ಸೊಳ್ಳೆಗಳು ಸಹ ಬರುತ್ತಿವೆ. ಅಷ್ಟೇ ಅಲ್ಲ ಇನ್ನು ಚಾನೆಲ್, ಮೋರಿಗಳ ಮೇಲೆ ಕೊಳೆತು ಹೋಗಿರುವ ಪದಾರ್ಥ ಹಾಗೂ ಮನೆಯಲ್ಲಿ ಮೂರು ನಾಲ್ಕು ದಿನ ಇಟ್ಟುಕೊಂಡಿರುವ ಮುಸುರೆ ನೀರನ್ನು ಸಹ ಹಾಕುತ್ತಾರೆ. ಪೊದೆ ಬೆಳೆದುಕೊಂಡು ಮೋರಿಯು ಸಹ ಕಾಣಿಸುತ್ತಿಲ್ಲ, ನೀರು ಹೋಗಲುದಾರಿನು ಇಲ್ಲ. ಅಲ್ಲೇ ನೀರು ನಿಲ್ಲುತ್ತದೆ ಅಲ್ಲೂ ಸಹ ಮೊದಲೇ ಹೇಳಿದಂತೆ ಸೊಳ್ಳೆಗಳು ಬರುತ್ತಿವೆ. ಸೊಳ್ಳೆ ಹೆಚ್ಚಾದ ಕಾರಣ ಬರುವ ಡೆಂಗ್ಯೂ ಕಾಯಿಲೆ ಇಂದ ಜನರಿಗೆ ಸಮಸ್ಯೆ ಆಗುತ್ತದೆ. ಇದರ ಬಗ್ಗೆ ಮುಡುಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಭದ್ರಾಚಾರಿಯವರು ಕಾಳಜಿ ವಹಿಸಬೇಕು ಇಲ್ಲದಿದ್ದರೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಸಾಕಷ್ಟು ಜನ ಕಯಿಲ್ಲೆ ಬೀಳುತ್ತಾರೆ ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
ವರದಿ: ನಜೀರ್ ಅಹಮದ್