ಅಲ್ಲಿನ ಮಹಿಳೆಯರು ತಮ್ಮ ಕುಟುಂಬಗಳಿಗೆ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಮಲಗಬೇಕು ಎಂದು ಒತ್ತಾಯಿಸಲಾಗುತ್ತಿದೆ. ಗಾರ್ಡಿಯನ್ನೊಂದಿಗೆ ಮಾತನಾಡಿದ ಮಹಿಳೆಯೊಬ್ಬರು, ಆಹಾರ ಸಂಗ್ರಹವಾಗಿರುವ ನಗರದಾದ್ಯಂತ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು. “ನನ್ನ ಹೆತ್ತವರಿಬ್ಬರೂ ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್ನು ನನ್ನ ಮಗಳನ್ನು ನಾನು ಆಹಾರಕ್ಕಾಗಿ ಹೊರಗೆ ಹೋಗಲು ಬಿಡಲಿಲ್ಲ. ನಾನು ಸೈನಿಕರ ಬಳಿಗೆ ಹೋದೆ, ಆಹಾರವನ್ನು ಪಡೆಯುವ ಏಕೈಕ ಮಾರ್ಗ ಅದೊಂದೇ ಆಗಿತ್ತು ಎಂದು ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 15 ರಂದು ಪ್ರಾರಂಭವಾದ ಸಂಘರ್ಷದ ಕೆಲವೇ ದಿನಗಳಲ್ಲಿ ಆಯುಧಗಳನ್ನು ಹೊಂದಿರುವ ಪುರುಷರು ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ ಎಂದು ವರದಿಗಳಾಯಿತು. ಸುಡಾನ್ನಲ್ಲಿನ ಯುದ್ಧವು ಹತ್ತಾರು ಸಾವಿರ ಜನರನ್ನು ಬಲಿ ಪಡೆದಿದೆ. ಕೆಲವು ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 150,000 ವರೆಗೆ ಇದೆ. ಯುದ್ಧವು ವಿಶ್ವದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ದೇಶವನ್ನು ಬರಗಾಲದ ಅಂಚಿಗೆ ತಂದಿತು.
ಆರ್ಎಸ್ಎಫ್ ಯೋಧರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಸೈನಿಕರೊಂದಿಗೆ ಮಲಗಿದ ನಂತರ ಖಾಲಿ ಮನೆಗಳಿಂದ ಆಹಾರ, ಅಡುಗೆ ಸಲಕರಣೆಗಳು ಮತ್ತು ಸುಗಂಧ ದ್ರವ್ಯಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಲಾಯಿತು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. “ನಾನು ಏನು ಅನುಭವಿಸಿದೆ ಎಂಬುದನ್ನು ಪದಗಳಲ್ಲಿ ಹೇಳಲು ಅಸಾಧ್ಯ, ನಾನು ಅದನ್ನು ನನ್ನ ಶತ್ರುಗಳಿಗೂ ಬಯಸುವುದಿಲ್ಲ,. ನನ್ನ ಮಕ್ಕಳಿಗೆ ಆಹಾರವನ್ನು ನೀಡಲು ನಾನು ಅದನ್ನು ಮಾಡಿದ್ದೇನೆ” ಎಂದು ಅವರು ಹೇಳಿದರು.
ಯುದ್ಧ ಪೀಡಿತ ಸುಡಾನ್ ಭೂಲೋಕದ ನರಕವಾಗಿ ಸೃಷ್ಟಿಯಾಗಿದೆ.