ಧಾರವಾಡ ಜಿಲ್ಲೆಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಳೆದ 6 ತಿಂಗಳಿಂದೆ ಆರಂಭವಾಗಿ ದಂತಹ ಐ ಸಿ ಇ ಫ್ಲೇಮ್ ಎಂಬ ಕಾರ್ಖಾನೆಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು 8 ಜನ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಈ ವಿಚಾರವಾಗಿ ಮಾತನಾಡಿದ ಕಾರ್ಖಾನೆಯ ಮ್ಯಾನೇಜರ್ ಯಾವುದೇ ರೀತಿಯ ಸ್ಫೋಟಕಗಳು ಇರಲಿಲ್ಲ ಹಾಗೂ ಯಾವುದೇ ರೀತಿಯ ಸ್ಫೋಟವು ಸಹ ಆಗಿಲ್ಲ. ಇದು ಬಟ್ಟೆಯಿಂದ ಹತ್ತಿಕೊಂಡು ಕೆಲಸಗಾರರನ್ನು ಸುಟ್ಟಿರುವುದು. 8 ಜನ ಕೆಲಸಗಾರರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
1 thought on “ಧಾರವಾಡದ ಐ ಸಿ ಇ ಫ್ಲೇಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; 8 ಮಂದಿಗೆ ಗಾಯ!”
Comments are closed.