ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಎ ಇ ಇ ಸೂಚನೆಯ ಮೇರೆಗೆ ಗುತ್ತಿಗೆದಾರ ಚಿಕ್ಕೇಗೌಡ ಎಂಬುವರ ಬಳಿ 1,51,000 ರೂ ಲಂಚವನ್ನು ಇಂಜಿನಿಯರ್ ಗಳು ಪಡೆಯುವಾಗ ಲೋಕಾಯುಕ್ತ ಪೊಲೀಸ್ ರ ಬಲೆಗೆ ಬಿದ್ದಿದ್ದಾರೆ.
ಎ ಇ ಇ ಉಮಾ ಮಹೇಶ್, ಎ ಇ ಕಿರಣ್ ಕುಮಾರ್, ಎ ಇ ಶಶಿಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

error: Content is protected !!