ಕುಂದಗೋಳ: ಸರಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಅಧಿಸೂಚನೆ ಹೊರಡಿಸುತ್ತೇ. ಅದರಂತೆ ಸರ್ಕಾರ ಕಟ್ಟಡದ ರಕ್ಷಣೆಗೆ ಅಂತ ಯೋಜನೆ ರೂಪಿಸಿ ಸರಕಾರ ಹಣ ಬಿಡುಗಡೆಗೂಳಸಿದೆ. ಆದರೆ ಇಲ್ಲೋಂದು ಕಟ್ಟಡದ ಕಂಪೌಂಡ್ ನಿರ್ಮಿಸಲು 5 ಲಕ್ಷ ರೂಪಾಯಿ ವ್ಯಯ ಮಾಡಿದ್ದು ಸದ್ಯ ಬಿರುಕು ಬಿಟ್ಟಿದೆ.
ಅದು ಯಾವುದು ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ . ದಿನನಿತ್ಯ ಒಂದಿಲ್ಲೊಂದು ರೈತರ ಸಲಕರಣೆಗಳು ಖರೀದಿಸಲು ಈ ರೈತ ಸಂಪರ್ಕ ಕೇಂದ್ರಕ್ಕೆ ಬರುವುದು ಸರ್ವೇ ಸಾಮಾನ್ಯ. ಅದರಂತೆ ಕುಂದಗೋಳ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ನಿರ್ಮಿಸಿಲಾಗಿದ ರೈತ ಸಂಪರ್ಕ ಕೇಂದ್ರ ಸುತ್ತಲೂ ಕಂಪೌಂಡ್ ನಿರ್ಮಿಸಿದ್ದು, ಬಿರುಕು ಬಿಟ್ಟ ಘಟನೆ ಕುಂದಗೋಳ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಮಟ್ಟಕ್ಕೆ ಕಾರಣವಾಗಿದೆ.
ಬರೋಬ್ಬರಿ ಎರಡು ವರ್ಷಗಳ ಕಳೆದು ಕಾಮಗಾರಿ ಮುಕ್ತಾಯಗೂಂಡಿದ್ದು ಆದರೆ ಬಿರುಕು ಬಿಟ್ಟಿದ್ದು ಕಳೆಪ ಕಾಮಗಾರಿ ಹಿಡಿದ ಕೈಗನ್ನಡಂತಯಾಗಿದೆ. ಕಟ್ಟಡದ ಒಳಗೆ ಹಾವು ಪ್ರಾಣಿಗಳು ಇನ್ನಾವುದೇ ಒಳಗೆ ಬರಬಾರದೆಂದು ಕಟ್ಟಡದ ರಕ್ಷಣೆಗೆ ಅಂತ ಕಂಪೌಂಡ್ ನಿರ್ಮಾಣ ಮಾಡಿದ್ದು. ಇದು ಅಧಿಕಾರಿಗಳ ಬೇಜವಾಬ್ದಾರಿತನ ಅನ್ನುವುದ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತ ನಾವು ಹೇಳ್ತಾ ಇಲ್ಲ ಇಲ್ಲಿ ಜನ ಹೇಳ್ತಾ ಇದರೆ ನೋಡಿ.

ಒಟ್ಟಿನಲ್ಲಿ ಸರಕಾರಕ್ಕೆ ಇದೊಂದು ಬೊಕ್ಕಸಕ್ಕೆ ಕಾರಣವಾಗಿದೆ ಈಗೇ ಬೇಕಾಬಿಟ್ಟಿ ಮನಬಂದಂತೆ ನಿರ್ಮಿಸಿ ಜನರ ತೆರಿಗೆ ಹಣಕ್ಕೆ ಕತ್ತಿರಿ ಹಾಕಿ ಅಧಿಕಾರಿಗಳು ಮಾತ್ರ ತಮ್ಮ ಕಛೇರಿಯಲ್ಲಿ ಕೂತ್ತು ಕಾಮಗಾರಿ ಪರಿಶೀಲನೆ ಮಾಡದೆ ಅನುಮೋದನೆ ನೀಡಿದ್ದು ವಿಪರ್ಯಾಸ ಸಂಗತಿ.
ವರದಿ: ಶಾನು ಯಲಿಗಾರ

error: Content is protected !!