ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ನಗರ ಠಾಣೆ ಪೊಲೀಸರು ಭರ್ಜರಿ ಗಾಂಜಾ ಭೇಟೆ ನಡೆಸಿದ್ದು 4,50,000 ಮೊತ್ತದ ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ (10/11/2024) ಸಂಜೆ 5.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತೆಂಗಿನಗುಡಿ ಕ್ರಾಸ್ ಬಳಿ ಹುಂಡೈ ಕಂಪನಿಯ ಬಿಳಿ ಬಣ್ಣದ ಎಸೆಂಟ್ ಕಾರಿನಲ್ಲಿ 9 ಕೆ.ಜಿ. 170 ಗ್ರಾಂ ತೂಕದ ನಿಷೇಧಿತ ಗಾಂಜಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಪೊಲೀಸರು ಕಾರು, ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.
ವಶ ಪಡಿಸಿಕೊಂಡ 9 ಕೆ.ಜಿ. 170 ಗ್ರಾಂ ಗಾಂಜಾ ಬೆಲೆ 4,50,000 ರೂಪಾಯಿ ಮತ್ತು ವಶ ಪಡಿಸಿಕೊಂಡ ಕಾರಿನ ಬೆಲೆ 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಯ್ಯದ್ ಅಕ್ರಂ (24), ಅಬ್ದುಲ್ ರೆಹಮಾನ್ (27), ಅಜರುದ್ದೀನ್ (41) ಇವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಜೊತಗಿದ್ದ ಖಾಸಿಂ ಎನ್ನುವಾತ ತಪ್ಪಿಸಿಕೊಂಡಿದ್ದು, ಈತನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.
ಭಟ್ಕಳ ಪೊಲೀಸರ ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ: ಮಂಜುನಾಥ್ ಎಫ್ ಎಚ್
error: Content is protected !!