ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ ಶಿವರಾಜ್.ಮಲ್ಲಪ್ಪ. ನಾಯ್ಕೊಡಿ 31 ಸಾವಿಗೀಡಾಗಿದ್ದಾನೆ.
ಭಾನುವಾರ ಬೆಳಿಗ್ಗೆ 7ಗಂಟೆಗೆ ಶಿವರಾಜನು ಡಂಬಳ ಗ್ರಾಮದ ಗೊಲ್ಲಳಪ್ಪನ ಮಾಲೀಕತ್ವದ KA29A2973 ಆಟೋದಲ್ಲಿ ಸಿಂದಗಿ ಸಂತೆಯಲ್ಲಿ ಕುರಿಮರಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ಗೊಲಗೇರಿ ಕಡೆಯಿಂದ ಯಾದಗಿರಿ ಡಿಪುವಿನ KA 33F0604 ಯಾದಗಿರಿ to ಸಾತರಾ ಬಸ್ಸು ಮತ್ತು ಆಟೋದ ಮಧ್ಯ ಭೀಕರ ಅಪಘಾತ ನಡೆದಿದೆ.
ಅಪಘಾತದಲ್ಲಿ ಇನ್ನುಳಿದ 4 ಜನ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ ಈ ಕುರಿತು ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕೆಲವು ತಿಂಗಳ ಹಿಂದೆ ಯಂಕಂಚಿ ಗ್ರಾಮದ ಹತ್ತಿರ ಇಂತಹದೇ ಅಪಘಾತ ಪ್ರಕರಣ ನಡೆದೆತ್ತು ಆ ಸಮಯದಲ್ಲಿ ಕೂಡ ಗೋಲಗೇರಿ ಗ್ರಾಮದ ಒಬ್ಬ ಯುವಕ ಸಾವಿಗೀಡಾಗಿದದ್ದು . ಸಿಂದಗಿಯಿಂದ ಶಹಾಪುರ ಹೋಗುವ ರಾಜ್ಯ ಹೆದ್ದಾರಿ ಮನ್ನಾಪುರ ಗ್ರಾಮ ದಿಂದ ಗೊಲಗೇರಿ ಸುಮಾರು 14 ಕಿಲೋಮೀಟರ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದ್ದು ಇನ್ನಾದರು PWD ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ರಸ್ತೆ ಸುಧಾರಿಸಿ ಇನ್ನಷ್ಟು ಅಪಘಾತಗಳನ್ನು ಆಗದಂತೆ ನೋಡಿಕೊಳ್ಳಬೇಕು

ವರದಿ: ದಾವಲಸಾಬ್ ಬನ್ನಟ್ಟಿ
error: Content is protected !!