ಕಳೆದ ದಿ 23/07/2022 ರಂದು ಸಾಯಂಕಾಲ ಧಾರವಾಡ ಜಿಲ್ಲೆಯ ತಾರಿಹಾಳ್ ಕೈಗಾರಿಕಾ ಪ್ರದೇಶದಲ್ಲಿ ಈ ಐ ಸಿ ಪ್ಲೇಮ್ ( ಸ್ಪಾರ್ಕರ್ ) ಫ್ಯಾಕ್ಟರಿಯಲ್ಲಿ ಸುಮಾರು 4 ಘಂ ವೇಳೆಯಲ್ಲಿ ಬೆಂಕಿ ಅವಘಡವಾಗಿತ್ತು ಈ ಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 8 ಜನ ಕೆಲಸಗಾರರು ಬೆಂಕಿ ತಗುಲಿ ಗಾಯಗೊಂಡಿದ್ದರು ತಕ್ಷಣ ಸ್ಥಳೀಯ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ಈ ಗಾಯಗೊಂಡ 8 ಜನರನ್ನು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮಾನ್ಯ ಸ್ಥಳಿಯ ಶಾಸಕರು ಶ್ರೀ ಶಂಕರ ಪಾಟೀಲ್ ಮುನೇನಕೊಪ್ಪ, ಶ್ರೀ ಅರವಿಂದ ಬೆಲ್ಲದ ಹಾಗೂ ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲೋಕೇಶ್ ಜಲಾಸಗರ್ ರವರು ಕಿಮ್ಸ್ ಆಸ್ಪತ್ರೆಯ ವೈದ್ಯರಿಗೇ ನೀವು ಹಾಗೂ ನಿಮ್ಮ ತಂಡದವರು ಆ ಗಾಯಾಳುಗಳಿಗೆ ಒಳ್ಳೆಯ ಚಿಕಿತ್ಸೆ ನೀಡಬೇಕು ಹಾಗೂ ಅವರೆಲ್ಲರೂ ಬೇಗ ಗುಣಮುಖರಾಗಬೇಕು ಎಂದು ಸೂಚಿಸಿದ್ದರು ಆದರೇ ವಿಧಿ ಎಷ್ಟು ಕ್ರೂರಿ 8 ಜನ ಸುಟ್ಟು ಗಾಯಗೊಂಡವರಲ್ಲಿ ಗದಗ್ ಮೂಲದ 35 ವರ್ಷದ ವಿಜಯಲಕ್ಷ್ಮಿ ವೀರಭದ್ರಪ್ಪ ಯಚ್ಚನಾಗರ್ ಎಂಬ ಮಹಿಳೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಹಾಗೂ ಬೆಳಗ್ಗೆ 45 ವರ್ಷದ ಗೌರವ್ವ ಎಂಬ ಮಹಿಳೆ ಮತ್ತೂ 27 ವರ್ಷದ ಮಾಲೇಶ್ ಹದ್ದಣ್ಣವರ್ ಎಂಬ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ 8 ಜನರಲ್ಲಿ 3 ಜನರು ಅಸುನಿಗಿದ್ದು ಇನ್ನೂ 5 ಜನರ ಚಿಕಿತ್ಸೆ ಮುಂದುವರೆದಿದೆ .
ಈ ಬೆಂಕಿ ಅವಘಡದಲ್ಲಿ ಗಾಯಗೊಂಡವರು
1) ವಿಜಯಲಕ್ಷ್ಮಿ ಯಚ್ಚನಾಗರ್
35 ವರ್ಷ .
2) ಗೌರವ್ವ ಹಿರೇಮಠ್ 45 ವರ್ಷ.
3) ಮಲಿಕ್ರೆಹನ್ ಕೊಪ್ಪದ್ 27 ವರ್ಷ.
4) ನಿರ್ಮಲಾ ಹುಚ್ಚಣ್ಣವರ್ 29 ವರ್ಷ.
5) ಚೆನ್ನವ್ವಾ ಅರಿಮಲ್ 42 ವರ್ಷ.
6) ಮಾಲೇಶ ಹದ್ದಣ್ಣವರ್ 27 ವರ್ಷ.
7) ನಾನೀಮಾ ಅರಿಮಲ್ 35 ವರ್ಷ.
8) ಪ್ರೇಮಾ ಅರಿಮಲ್ 20 ವರ್ಷ.
ಎಂದೂ ತಿಳಿದು ಬಂದಿದೆ .
ವರದಿ : ಶಿವ ಹುಬ್ಬಳ್ಳಿ .