ಬೆಳಗಾವಿ: ಯಮನಾಪುರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘದ ಹೆಸರಿನಲ್ಲಿ 7,000 ಮಹಿಳೆಯರಿಂದ ಸಾಲ ಪಡೆದು, ಕಂತುಗಳನ್ನು ಪೂರೈಸದೆ 19.35 ಕೋಟಿ ರೂ. ದೋಖಾ ನಡೆಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಆರೋಪಿಗಳು ಯಮನಾಪುರ ಗ್ರಾಮದ ಅಶ್ವಿನಿ ಹೊಳೆಪ್ಪ ದಡ್ಡಿ, ಅವಳ ಪತಿ ಹೊಳೆಪ್ಪ ಫಕೀರಪ್ಪ ದಡ್ಡಿ ಹಾಗೂ ಅವರ ಮಕ್ಕಳು ಸೇವಂತಾ ಹೊಳೆಪ್ಪ ದಡ್ಡಿ ಮತ್ತು ಪ್ರಿಯಾಂಕಾ ಹೊಳೆಪ್ಪ ದಡ್ಡಿ ಎಂದು ಗುರುತಿಸಲಾಗಿದೆ.
ದೂರುದಾಯಕತೆಯಾಗಿ, ಸೋನಟ್ಟಿ ಗ್ರಾಮದ ಶೇಖಾ ಕನ್ನಪ್ಪ ಹಂಚಿಮನಿ ಎಂಬ ಮಹಿಳೆ ಅವರು ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.
ಆರೋಪಿಗಳು ಯಮನಾಪುರ ಹಾಗೂ ಇತರ ಹಳ್ಳಿಗಳಲ್ಲಿ ಫೈನಾನ್ಸ್ ಸಂಸ್ಥೆಗಳ ಮೂಲಕ ಮಹಿಳೆಯರಿಗೆ “ಸಾಲವನ್ನು ತೆಗೆದುಕೊಂಡು ಸಬ್ಸಿಡಿ ಪಡೆಯಿರಿ, ನಿಮ್ಮ ಎಲ್ಲಾ ಕಂತುಗಳನ್ನು ನಾವು ಪೂರೈಸುತ್ತೇವೆ” ಎಂದು ಭರವಸೆ ನೀಡಿದ್ದರು. ಇದರಿಂದ, 7,707 ಮಹಿಳೆಯರಿಂದ ಮೊತ್ತ 19,35,35,636 ರೂ. ಹಣವನ್ನು ಪಡೆದುಕೊಂಡಿದ್ದಾರೆ.
ಅನೇಕ ವರ್ಷಗಳಿಂದ, ಸಾಲವನ್ನು ತೆಗೆದು ಕಂತುಗಳನ್ನು ಪೂರೈಸುವುದಾಗಿ ಹೇಳಿದರೂ, ಯಾವುದೇ ಕಂತುಗಳನ್ನು ಪೂರೈಸದೇ, ಇತ್ತೀಚೆಗೆ ಈಗ ವಂಚನೆಗೆ ಒಳಗಾದ ಮಹಿಳೆಯರಿಗೆ ಫೈನಾನ್ಸ್ ಸಂಸ್ಥೆಗಳು ಕಿರುಕುಳ ನೀಡುತ್ತಿರುವುದಾಗಿ ಅವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

Related News

error: Content is protected !!