ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹ್ಯಾಕಿಂಗ್‌ ಪ್ರಕರಣಗಳು ಹೆಚ್ಚಾಗಿವೆ, ಮತ್ತು ಇದೀಗ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್‌ಗೂ ಹ್ಯಾಕಿಂಗ್ ವೈರಸ್‌ನ ಕಾಟ ಶುರುವಾಗಿದೆ.
ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡುವ ಹೊಸ ತಂತ್ರಾಂಶವು ಪೋಸ್ಟ್‌ಗಳಲ್ಲಿ ಭಯ ಹುಟ್ಟಿಸಿದೆ. ಈ ತಂತ್ರಾಂಶವನ್ನು ಎಪಿಕೆ ಫೈಲ್‌ಗಳ ಮೂಲಕ ಹ್ಯಾಕರ್ಸ್‌ಗಳು ಮೊಬೈಲ್‌ಗಳ ಸಂಪೂರ್ಣ ನಿಯಂತ್ರಣವನ್ನು ಪಡೆದು, ವೈಯಕ್ತಿಕ ಮಾಹಿತಿಯನ್ನು ದೋಚಬಹುದು. ಇದೇ ಕಾರಣಕ್ಕಾಗಿ ಪೊಲೀಸರು ಎಪಿಕೆ ಫೈಲ್‌ಗಳನ್ನು ಯಾವುದೇ ರೀತಿಯಲ್ಲಿ ಕ್ಲಿಕ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಸಲಿಯಲ್ಲಿಯೂ, ಈ ತಂತ್ರಾಂಶವು ಪ್ಲೇ ಸ್ಟೋರ್‌ನಲ್ಲಿಯೇ ಲಭ್ಯವಿದ್ದು, ಸೈಬರ್ ಕಳ್ಳರು ಇದನ್ನು ಕಸ್ಟಮೈಸ್ ಮಾಡಿ ವಾಟ್ಸಾಪ್‌ ಮೂಲಕ ಹರಡಿಸುತ್ತಿದ್ದಾರೆ. ಇದು ಹಳೆಯ ತಂತ್ರಜ್ಞಾನವಾದರೂ, ಇದನ್ನ ಕ್ಲಿಕ್ ಮಾಡಿದಾಕ್ಷಣ ಹ್ಯಾಕರ್ಸ್‌ ಗಳಿಗೆ ಎಲ್ಲಾ ಮಾಹಿತಿಯನ್ನು ಲಭ್ಯವಾಗಿಸಲು ಸಹಾಯ ಮಾಡುತ್ತದೆ.
ಆದಕಾರಣ, ನೀವು ಎಪಿಕೆ ಫೈಲ್‌ ಕ್ಲಿಕ್ ಮಾಡಿದರೆ, ಕೂಡಲೇ ಅದನ್ನು ಡಿಲೀಟ್‌ ಮಾಡಿ, ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕ್ ಪಾಸ್‌ವರ್ಡ್, ಮೊಬೈಲ್ ಪಾಸ್‌ವರ್ಡ್, ಇಮೇಲ್, ಮತ್ತು ಯುಪಿಐ ಪಾಸ್‌ವರ್ಡ್‌ಗಳನ್ನು ಕೂಡಲೇ ಬದಲಾಯಿಸಲು ಸೈಬರ್ ಪೊಲೀಸ್‌ಗಳು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!