ಹಾರೋಹಳ್ಳಿ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಸ್ಥಾಪನೆಯಾಗಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೂ ಮುನ್ನವೇ ಕಿಡಿಗೇಡಿಗಳ ಅಕ್ರಮ ಚಟುವಟಿಕೆಗಳಿಗೆ ಸೇರುವ ಸ್ಥಳವಾಗಿ ಮಾರ್ಪಟ್ಟಿದೆ.
ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸ್ಥಾಪಿತವಾದ ಈ ಕ್ಯಾಂಟೀನ್, ತಾಲ್ಲೂಕು ಕಚೇರಿಯಿಂದ ದೂರದಲ್ಲಿದೆ. ಈ ಕ್ಯಾಂಟೀನ್ ಅನ್ನು ರಾಜ್ಯ ಸರ್ಕಾರ ಜನರ ಅನುಕೂಲಕ್ಕಾಗಿ ಪ್ರಾರಂಭಿಸಬೇಕೆಂದು ಜಾಗವನ್ನು ಆಯ್ಕೆ ಮಾಡಿತ್ತು. ಆದರೆ, ಇತ್ತೀಚೆಗೆ ಕಟ್ಟಡ ಪೂರ್ಣಗೊಂಡು ಐದು ತಿಂಗಳು ಆಗಿದ್ದರೂ, ಇದರ ಮೂಲಭೂತ ಸೌಕರ್ಯಗಳು, ನೀರು ಮತ್ತು ವಿದ್ಯುತ್, ಇನ್ನೂ ಸಂಪರ್ಕವಾಗಿಲ್ಲ. ಇದರಿಂದಾಗಿ, ಈ ಕಟ್ಟಡವನ್ನು ಕಿಡಿಗೇಡಿಗಳು ತಮ್ಮ ಅಕ್ರಮ ಚಟುವಟಿಕೆಗಳಿಗೆ ಉಪಯೋಗಿಸಕೊಳ್ಳುತ್ತಿದ್ದಾರೆ.
ಹಾರೋಹಳ್ಳಿ ಪಟ್ಟಣದಲ್ಲಿ ಪ್ರತಿದಿನವೂ ಸಾವಿರಾರು ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಕೆಲಸ ಮತ್ತು ಶಾಲೆಗಳಿಗೆ ತೆರಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಇಂದಿರಾ ಕ್ಯಾಂಟೀನ್‌ ನಂತಹ ಯೋಜನೆಯ ಅವಶ್ಯಕತೆ ಹೆಚ್ಚಿದ್ದು, ಈ ಕಟ್ಟಡವನ್ನು ಜವಾಬ್ದಾರಿಯುತವಾಗಿ ಬಳಸಬೇಕಾಗಿತ್ತು. ಆದರೆ, ಖಾಲಿ ಕಟ್ಟಡವನ್ನು ಬಂಡವಾಳವಾಗಿ ಬಳಸಿಕೊಂಡು ಕಿಡಿಗೇಡಿಗಳು ಅದನ್ನು ಕುಡಿತ ಹಾಗೂ ಅನಧಿಕೃತ ಚಟುವಟಿಕೆಗಳ ಸ್ಥಳವಾಗಿ ಮಾರ್ಪಟ್ಟಿದ್ದಾರೆ.
ಇನ್ನು, ಈ ಸ್ಥಳ ದ್ವಿಚಕ್ರ ವಾಹನ ಸವಾರರ ಪಾರ್ಕಿಂಗ್ ಕೂಡಾಗಿ ಬಳಸಲಾಗುತ್ತಿದೆ. ಈ ಅಕ್ರಮ ಚಟುವಟಿಕೆಗಳಿಗೆ ತಡೆಯು ಹಾಕಲು ಸ್ಥಳೀಯರು ಪೊಲೀಸರ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!