ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಪ್ರಭಾವಿ ಫನ್ ಬಕೆಟ್ ಭಾರ್ಗವ್ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ವಿಶಾಖಪಟ್ಟಣಂನ ಪೋಕ್ಸೊ ಕೋರ್ಟ್ ಈ ತೀರ್ಪು ನೀಡಿದ್ದು, ಅಲ್ಲದೆ, ದುರಾದ್ಧಿಶ್ಚಿತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ದೇಶಿಸಿದೆ.
ಭಾರ್ಗವ್, ಮೊದಲು ಟಿಕ್‌ಟಾಕ್‌ನಲ್ಲಿ ಹಾಸ್ಯ ವೀಡಿಯೊಗಳ ಮೂಲಕ ಖ್ಯಾತಿ ಗಳಿಸಿದ್ದನು. ನಂತರ, “ಫನ್ ಬಕೆಟ್” ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಕಾಮಿಡಿ ವೀಡಿಯೊಗಳನ್ನು ಮಾಡುತ್ತಾ ತನ್ನ ಅಭಿಮಾನಿಗಳನ್ನು ವಿಸ್ತರಿಸಿದ್ದ. ಆದರೆ, ಡಿಯೋ ತೆಗೆಯುವ ನೆಪದಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದುದಾಗಿ ಆರೋಪಿಸಲಾಗಿದೆ.
ಆ ಯುವತಿ ಗರ್ಭಿಣಿಯಾಗಿದ ಮೇಲೆ, ಅವಳ ತಾಯಿ ಪೊಲೀಸರಿಗೆ ದೂರು ನೀಡಿದ ಪರಿಣಾಮ ಭಾರ್ಗವ್ ವಿರುದ್ಧ ದಿಶಾ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಭಾರ್ಗವ್ ಬಂಧಿತನಾಗಿದ್ದಾನೆ, ಮತ್ತು ಈ ಪ್ರಕರಣವನ್ನು ಪೊಲೀಸರು ಮುಂದುವರೆಸಿದ್ದಾರೆ.