ಗಂಗಾವತಿ: ಗಂಗಾವತಿ ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಪ್ರಸಾದ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ. ಲಿಂಗರಾಜು ಅಮಾನತುಗೊಳಿಸುವುದಾಗಿ ಆದೇಶ ನೀಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ವಿಜಯಪ್ರಸಾದ ಅವರು ಡಾ. ಲಿಂಗರಾಜು ಅವರೊಂದಿಗೆ ಸಭೆಯೊಳಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಸಭೆಯಲ್ಲಿ ಅವರು, ಕಾರ್ಯಕ್ರಮಗಳ ಪ್ರಗತಿ ಹಾಗೂ ಅಂಕಿ ಅಂಶಗಳನ್ನು ಸರಿಯಾಗಿ ವಿವರಿಸಲು ವಿಫಲವಾದಿದ್ದಾರೆ. ಪಟ್ಟಣ ಮಟ್ಟದಲ್ಲಿ ಮಾಹಿತಿಯನ್ನು ಸರಿಯಾಗಿ ನೀಡದೆ, ಎಲ್ಲಾ ಮಾಹಿತಿಗಾಗಿ ತಾಲೂಕು ಆರೋಗ್ಯಾಧಿಕಾರಿಗಳನ್ನು ಕೇಳಬೇಕು ಎಂದು ಹೇಳಿ, ಹಿರಿಯ ಅಧಿಕಾರಿಗಳಿಗೆ ಅವಮಾನಕಾರಿಯಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ವಿಜಯಪ್ರಸಾದ ಅವರ ವರ್ತನೆ ಕರ್ತವ್ಯಲೋಪ, ದುರ್ನಡತೆ ಮತ್ತು ಮೇಲಾಧಿಕಾರಿಗಳಿಗೆ ಗೌರವಹೀನ ವರ್ತನೆ ತೋರಿರುವುದರಿಂದ, ಶಿಸ್ತು ಕ್ರಮವಾಗಿ ಅವರನ್ನು ಅಮಾನತುಗೊಳಿಸಲಾಗಿದೆ.