ಬೆಂಗಳೂರು: ನಟ ಶಿವರಾಜ್‌ಕುಮಾರ್ ಕೆಲ ದಿನಗಳ ಹಿಂದೆ ಅಮೆರಿಕದಫ್ಲೋರಿಡಾದಲ್ಲಿ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರು ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ, ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿದ್ದಾರೆ.
ಈಗ ಶಿವಣ್ಣ ಅವರ ಹೊಸ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅವರು ಸಂಪೂರ್ಣ ಎನರ್ಜಿ ಮತ್ತು ಆನಂದದಿಂದ ಕೂಡಿದ ಫೋಟೋಗಳಲ್ಲಿ ಕಾಣಿಸಿಕೊಂಡು, ತಮ್ಮ ಅಭಿಮಾನಿಗಳನ್ನು ಸಂತೋಷಪಡಿಸಿದ್ದಾರೆ. ಅಲ್ಲದೇ, ಶಿವಣ್ಣ ಫೋಟೋಗಳಿಗೆ ಪೋಸ್ ಕೊಡುತ್ತಿರುವಾಗ ಪತ್ನಿ ಗೀತ ಅವರು ಅವುಗಳನ್ನು ಕ್ಲಿಕ್ಸ್ ಮಾಡುವ ವಿಡಿಯೋ ಕೂಡಾ ವೈರಲ್ ಆಗಿದೆ.