ಆರೋಪಿತರು ಜಿಲ್ಲೆಯ ಕಲಘಟಗಿ ಮಾರ್ಗವಾಗಿ ಯಲ್ಲಾಪುರದ ಕಡೆಗೆ ಮಾಹಿತಿ ಮೇರೆಗೆ ಪೊಲೀಸರು ಧಾಳಿ ನಡೆಸಲು ಹೋದಾಗ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿದ್ದು ಆರೋಪಿಗಳಿಗೆ ಗುಂಡಿನ ಪೆಟ್ಟು ನೀಡಲಾಗಿದೆ, ಗುರುವಾರ ರಾತ್ರಿ ಜಮೀರ್ ಅಹ್ಮದ್ ದುರ್ಗವಲೇ ಅವರನ್ನು ಅಪಹರಣ ಮಾಡಿದ್ದು ಅವರ ಕುಟುಂಬಕ್ಕೆ 30 ಲಕ್ಷ ಬೇಡಿಕೆ ಇಟ್ಟಿದ್ದು ಕುಟುಂಬದವರು 18 ಲಕ್ಷ ಕೊಟ್ಟು ಸುಮ್ಮನಾಗಿದ್ದರು ಆದರೆ, ಹಣ ತೆಗೆದುಕೊಂಡವರು ಪೊಲೀಸರ ಅತಿಥಿಯಾಗಿದ್ದಾರೆ ಆದರೆ ಈ ಖತರ್ನಾಕ್ ಐಡಿಯ ಕೊಟ್ಟವರು ಸಿಕ್ಕಿರಲಿಲ್ಲ, ಅವರ ಸುಳಿವು ಸಿಕ್ಕ ಪೊಲೀಸರು ಅವರನ್ನು ಬೆನ್ನಟ್ಟಿ ಹೋಗಿದ್ದರು ,
ರಂಗನಾಥ ನೀಲಮ್ಮನವರ , ಪೊಲೀಸ್ ನಿರೀಕ್ಷಕರು ಮುಂಡಗೋಡ, ಪ್ರಕರಣದಲ್ಲಿ ಸಿಬ್ಬಂದಿಗಳೊಂದಿಗೆ ಆಪಾದಿತರ ಪತ್ತೆ ಕಾರ್ಯದಲ್ಲಿ ಇರುವ ಸಮಯದಲ್ಲಿ ಆರೋಪಿತರು ಕೆ ಎ ೨೩ \ ಎಮ್ ೮೧೮೫ ರಲ್ಲಿ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆ ಹೋಗುತ್ತಿರುವ ಬಗ್ಗೆ ನಿಖರ ಮಾಹಿತಿ ಬಂದಿರುವ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಆರೋಪಿತರನ್ನು ಹಿಂಬಾಲಿಸುತ್ತ ದಿನಾಂಕ ೧೧- ೧- ೨೦೨೫ ರಂದು ಬೆಳಗಿನ ಜಾವ ೪ ೩೦ ರಿಂದ ೫ ಗಂಟೆ ಸುಮಾರಿಗೆ ಯಲ್ಲಾಪುರ ತಾಲ್ಲೂಕಿನ ಡೌಗಿನಾಳ ಕ್ರಾಸ್ ಹತ್ತಿರ ತಲುಪಿ ,ಆಪಾದಿತರಿಗೆ ಕಾರನ್ನು ನಿಲ್ಲಿಸಲು ಹೇಳಿದಾಗ ಆಪಾದಿತರು ಕಾರನ್ನು ನಿಲ್ಲಿಸದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು , ಕಾರಿನಿಂದ ೦೫ ಜನ ಆಪಾದಿತರು ಚಾಕು ಹಾಗೂ ಮಚ್ಚನ್ನು ಕೈಯಲ್ಲಿ ಹಿಡಿದುಕೊಂಡು , ಕೆಳಗೆ ಇಳಿದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮಲ್ಲಿ ಇವತ್ತು ಒಬ್ಬರನ್ನಾದರೂ ಜೀವ ತೆಗಿಯದೆ ಬಿಡುವುದಿಲ್ಲ ಅಂತಾ ಹೇಳುತ್ತಾ ೧ ನೇ ಆಪಾದಿತ – ಅಜೇಯ ತಂದೆ ಫಕೀರಪ್ಪ ಮಡ್ಲಿ ಈತನು ಅಲ್ಲಿದ್ದ ಕಲ್ಲನ್ನು ಪಿರ್ಯಾದಿಯವರ ಕಡೆಗೆ ಬೀಸುತ್ತಾ ಹಲ್ಲೆ ಮಾಡಲು ಬಂದವನಿಗೆ ಹಿಡಿಯಲು ಮುಂದಾದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರ ಮೇಲೆ ತಮ್ಮ ಬಳಿಯಿದ್ದ ಖಾರದ ಪುಡಿಯನ್ನು ಮೈಮೇಲೆ ಎರಚಿ ಮಚ್ಚಿನಿಂದ ಹಲ್ಲೆ ಮಾಡಿ ಹಾಗೂ, ಪಿರ್ಯಾದಿಯವರ ಎಡ ಕಾಲಿಗೆ ಕಲ್ಲಿನಿಂದ ಹೊಡೆದು ದೂಡಿ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಮಚ್ಚನ್ನು ಬೀಸಲು ಬಂದಾಗ ಹೆಚ್ ಸಿ ಮಹಮದ್ ಶಫಿ ಶೇಖ್ ಇವರು ತಡೆದಾಗ ಅವರ ಕೈಗೆ ಮಚ್ಚಿನಿಂದ ಹಲ್ಲೆ ಮಾಡಿ , ಮತ್ತೆ ಪಿರ್ಯಾದಿಯವರ ಕಡೆ ಬೀಸುತ್ತಿದ್ದಾಗ ಪಿರ್ಯಾದಿಯವರು ತಮ್ಮ ಬಳಿ ಇದ್ದ ಇಲಾಖೆಯ ಪಿಸ್ತೂಲಿನಿಂದ ಎರಡು ಬಾರಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರೂ ಕೂಡ ಆರೋಪಿಯು ಮಚ್ಚನ್ನು ಪುನಃ ಪಿರ್ಯಾದಿಯವರ ಕಡೆ ಬೀಸಿದಾಗ ಪ್ರಾಣ ರಕ್ಷಣೆಗೆ ಆಪಾದಿತನ ಎಡ ಕಾಲಿಗೆ ಗುಂಡು ಹಾರಿಸುತ್ತಾರೆ . ಆಗ ಇನ್ನೊಬ್ಬ ೨ ನೇ ಆರೋಪಿತ – ಅಲ್ಲಾಹುದ್ದೀನ್ ರಹೀಮ್ ತಂದೆ ಮಹಮದ್ ಜಾಫರ್ ಸಾಬ ಈತನು ನಮ್ಮ ಮೇಲೆಯೇ ಗುಂಡು ಹಾರಿಸುತ್ತೀರಾ ಅಂತ ಹೇಳಿ ಪಿ ಎಸ್ ಐ ಪರಶುರಾಮ್ ಇವರಿಗೆ ದೂಡಿಹಾಕಿ ಚಾಕುವಿನಿಂದ ಹಲ್ಲೆ ಮಾಡಲು ಹೋದಾಗ ಪಿ ಎಸ್ ಐ ಅವರು ಕೂಡಾ ತಮ್ಮ ಹತ್ತಿರ ಇದ್ದ ಇಲಾಖೆಯ ಪಿಸ್ತೂಲಿನಿಂದ ಎರಡು ಬಾರಿ ಗಾಳಿಯಲ್ಲಿ ಗುಂಡನ್ನು ಹಾರಿಸಿ ಸುಮ್ಮನೆ ಅರೆಸ್ಟ್ ಆಗಿ ಅಂತ ಹೇಳಿದಾಗ ೨ ನೇ ಆಪಾದಿತ ಅಲ್ಲಾಹುದ್ದೀನ್ ನಿನ್ನನ್ನು ಮುಗಿಸಿ ಅರೆಸ್ಟ್ ಆಗುತ್ತೇನೆ ಅಂತ ಹೇಳಿ ಪಿ ಎಸ್ ಐ ರವರಿಗೆ ತನ್ನ ಕೈಯಲ್ಲಿದ್ದ ರಾಡ್ ನ್ನು ಹೊಡಿಯಲು ಮುಂದಾದಾಗ ಅವರು ತಮ್ಮ ಪ್ರಾಣ ರಕ್ಷಣೆಗೆ ರಾಡ್ ನಿಂದ ಹೊಡೆಯಲು ಬಂದವನ ಬಲಕಾಲಿಗೆ ಗುಂಡು ಹಾರಿಸಿದರು . ಆಗ ಉಳಿದ ಮೂರು ಜನ , ಆಪಾದಿತನು ಸುಮ್ಮನೆ ತಮ್ಮ ಕೈಯಲ್ಲಿದ್ದ ಆಯುಧಗಳನ್ನು ಕೆಳಗೆ ಒಗೆದು ಸುಮ್ಮನಾದರು .ಈ ಗುದ್ದಾಟದಲ್ಲಿ ಪಿರ್ಯಾದಿಯವರ ಎಡ ಕಾಲಿನ ಕೆಳಗೆ ಗುದ್ದಿದ ಗಾಯ , ಮೈಮೇಲೆ ಒಳಗಾಯ , ಪಿ ಎಸ್ ಐ ರವರಿಗೆ ಎರಡು ಕಾಲಿನ ಮೊಣಕಾಲಿನ ಹತ್ತಿರ ಬಲ ಕೈಗೆ ಗಾಯ ಹಾಗೂ ಎದೆಗೆ ಒಳಗಾಯ ನೋವಾಗಿದ್ದು. ಯಲ್ಲಾಪುರ ಪೊಲೀಸ್ ಠಾಣಾ ಸಿಬ್ಬಂದಿ ಹೆಚ್ ಸಿ ಮಹಮ್ಮದ್ ಶಫಿ ಶೇಖ್ ಈತನಿಗೆ ಎರಡು ಕೈಗಳಿಗೆ , ತಲೆಯ ಹತ್ತಿರ ರಕ್ತಗಾಯ ಹಾಗೂ ಮೈಗೆ ಒಳಗಾಯ ನೋವಾಗಿದ್ದು , ಗಿರೀಶ್ ಲಮಾಣಿ ಯಲ್ಲಾಪುರ ಪೊಲೀಸ್ ಠಾಣಾ ಈತನಿಗೂ ಮೈಮೇಲೆ ಒಳಗಾಯ ನೋವಾಗಿದ್ದು ,ಮುಂಡಗೋಡ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಮಂಜಪ್ಪ ಚಿಂಚಲಿ , ಕೋಟೇಶ್ ನಾಗರೋ ಅಣ್ಣಪ್ ಮಹಾಂತೇಶ್ ಮುಧೋಳ್ , ತಿರುಪತಿ ಚೌಡಣ್ಣರವರ ಸಿ ಇವರಿಗೂ ಕೂಡಾ ಸಣ್ಣಪುಟ್ಟ ಒಳಗಾಯ ನೋವಾಗಿದ್ದು ಇರುತ್ತದೆ . ಪಿರ್ಯಾದಿ ಹಾಗೂ ಗಾಯಗೊಂಡ ಸಿಬ್ಬಂದಿಗಳು ಯಲ್ಲಾಪುರದ ಸರಕಾರಿ ಆಸ್ಪತ್ತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ,ಇನ್ನು ಉಳಿದ ಎರಡು ಆರೋಪಿಗಳಿಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಯಲ್ಲಾಪುರ ಠಾಣೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿದೆ. ವರದಿ: ಶ್ರೀಪಾದ

Leave a Reply

Your email address will not be published. Required fields are marked *

error: Content is protected !!