ಚಿಕ್ಕಮಗಳೂರು: ಬಿಜೆಪಿ MLC ಸಿಟಿ ರವಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಅವಾಚ್ಯ ಪದ ಬಳಕೆ ಮಾಡಿದ್ದಕ್ಕಾಗಿ ಸಿಟಿ ರವಿಗೆ ಹತ್ಯೆ ಬೆದರಿಕೆ ಹಾಕಲಾಗಿದೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಸಿಟಿ ರವಿಯ ಮನೆಗೆ ಬಂದ ಕೊಲೆ ಬೆದರಿಕೆ ಪತ್ರದಲ್ಲಿ, “ನೀವು 15 ದಿನಗಳೊಳಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು” ಎಂದು ಉಲ್ಲೇಖಿಸಲಾಗಿದೆ. ಈ ಬೆದರಿಕೆ ಪತ್ರದಲ್ಲಿ ಸಿಟಿ ರವಿಯ ಪುತ್ರ ಸೂರ್ಯನ ಹೆಸರೂ ಇದ್ದು, ಆತಗೂ ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ಸಿಟಿ ರವಿಯ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಗತ್ಯವಿದ್ದರೆ ಸಿಟಿ ರವಿಯ ನಿವಾಸಕ್ಕೆ ಭದ್ರತೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.