ಹೈದರಾಬಾದ್ : ತೆಲುಗು ಸಿನೆಮಾ ನಾಡಿನ ಪ್ರಖ್ಯಾತ ನಟ ವೆಂಕಟೇಶ್ ದಗ್ಗುಬಾಟಿ (ವಿಕ್ಟರಿ ವೆಂಕಟೇಶ್) ಮತ್ತು ಬಾಹುಬಲಿ ಚಿತ್ರನಟ ರಾಣಾ ದಗ್ಗುಬಾಟಿ ಕುಟುಂಬಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ.
ಹೈದರಾಬಾದ್‌ನ ಫಿಲ್ಮ್ ಸಿಟಿಯ ಡೆಕ್ಕನ್ ಕಿಚನ್ ಹೋಟೆಲ್ ಅನ್ನು ನೆಲಸಮ ಮಾಡಿರುವ ಆರೋಪದ ಮೇಲೆ, ನಾಂಪಲ್ಲಿ ಕೋರ್ಟ್ ಆದೇಶದಂತೆ, ನಿರ್ಮಾಪಕ ಸುರೇಶ್ ಬಾಬು, ವೆಂಕಟೇಶ್, ರಾಣಾ ಹಾಗೂ ಅಭಿರಾಮ್ ವಿರುದ್ಧ ಫಿಲ್ಮ್ ಸಿಟಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಡಬ್ಲ್ಯು 3 ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ. ಲಿ. ಸಂಸ್ಥೆಯ ನಿರ್ದೇಶಕರು ಈ ವಿವಾದ ಸಂಬಂಧ ಮೊದಲು ದೂರು ದಾಖಲಿಸಿದ್ದರು. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡ ಹೋಟೆಲ್ ಧ್ವಂಸಗೊಂಡಿದ್ದು, ಇದಕ್ಕಾಗಿ ಐಪಿಸಿ ಸೆಕ್ಷನ್ 120(ಬಿ), 448, 452, 458 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.