ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಇರುವ ಅನುದಾನರಹಿತ ಶಾಲೆಯಾದ ಹುಲಿಗೆಮ್ಮದೇವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಬರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಮತ್ತು ಆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಕ್ರೂಜರ್ ವಾಹನದ ವ್ಯವಸ್ಥೆಯಿದ್ದು ಕ್ರೂಜರ್ ವಾಹನದಲ್ಲಿ ಗರಿಷ್ಠ 15ರಿಂದ 18 ಜನರನ್ನು ಹಾಕಬಹುದು ಆದರೆ ಈ ವಾಹನದ ಚಾಲಕ ಸುಮಾರು 35 ಶಾಲಾ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸುತ್ತಿದ್ದಾನೆ.ಮತ್ತು ಈ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿಯಲ್ಲಿ ನಡೆಯುವ ಶಾಲೆಯು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ, ಹಾಗೂ ಆಡಳಿತ ಮಂಡಳಿ ವರ್ಷಕ್ಕೆ ಎರಡು ಮೂರು ಬಾರಿ ಶಾಲೆಯ ಕೊಠಡಿಗಳನ್ನು ಬದಲಾವಣೆ ಮಾಡಿ ಮಕ್ಕಳಿಗೆ ತೊಂದರೆಯನ್ನು ಸಹ ಮಾಡುತ್ತಿದೆ ಎಂದು ದೂರುಗಳಿವೆ.ಪ್ರಸ್ತುತ ಈ ಶಾಲೆಯು ಒಂದು ಖಾಸಗಿ ಮನೆಯಲ್ಲಿ ನಡೆಯುತ್ತಿದ್ದು, ಇಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಪಾಠಗಳನ್ನು ಬೋಧಿಸಲಾಗುತ್ತಿದೆ.ಹಾಗೂ ವಿದ್ಯಾರ್ಥಿಗಳಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲದ, ಒಂದೇ ಮನೆಯಲ್ಲಿ ನಾಲ್ಕು ತರಗತಿಗಳನ್ನು ನಡೆಸಲು ಇವರಿಗೆ ಅನುಮತಿಯನ್ನು ಕೊಟ್ಟವರ್ಯಾರು?ಹಾಗೆಯೇ ಒಂದೇ ವಾಹನದಲ್ಲಿ ಸುಮಾರು 35 ವಿದ್ಯಾರ್ಥಿಗಳನ್ನು ಕುರಿಗಳಂತೆ ವಾಹನದಲ್ಲಿ ತುಂಬುತ್ತಿದ್ದರು ಶಾಲಾ ಆಡಳಿತ ಮಂಡಳಿ,ಹಾಗೂ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
ಈ ಶಾಲೆಯು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಪರವಾನಿಗೆ ಪಡೆದು, ಆಂಗ್ಲಮಾಧ್ಯಮದಲ್ಲಿ ಬೋಧನೆಯನ್ನು ಮಾಡುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಎಂದು ಕಾಯ್ದು ನೋಡಬೇಕಿದೆ.
ವರದಿ: ಕುಮಾರ ರಾಠೋಡ