ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು ವಾರಗಳಿಂದ ಪ್ರಾರಂಭವಾದ ಆರೂಢ ವೈಭವ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆರೂಢ ವೈಭವ ಥೀಮ್ ಪಾರ್ಕ್ ನಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಇವತ್ತು ಮಕರ ಸಂಕ್ರಾಂತಿ ಹಬ್ಬ ಪ್ರಯುಕ್ತ ಬಹಳಷ್ಟು ಜನರು ಥೀಮ್ ಪಾರ್ಕ್ ನೋಡಲು ಆಗಮಿಸಿದ್ದರು. ಗಾಡಿಗಳು ಹೆಚ್ಚಾಗಿ ಬಂದು, ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲದ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಗಾಡಿಗಳು ನಿಂತಿರುವುದು ಕಂಡುಬಂದಿತು. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿದ್ದು ಈ ರಸ್ತೆಯಲ್ಲಿಯೇ ಸಾಕಷ್ಟು ಗಾಡಿಗಳು ದಿನನಿತ್ಯ ಓಡಾಡುತ್ತಾವೆ. ಆರಂಭವಾಗಿ ಎರಡು ವಾರದಲ್ಲಿಯೇ ದಿನಕ್ಕೆ ಸುಮಾರು ಸಾವಿರಾರು ಜನ ಪಾರ್ಕ್ ನೋಡಲು ಆಗಮಿಸುತ್ತಿದ್ದಾರೆ. ಸುತ್ತ ಮುತ್ತಲಿನ ಗ್ರಾಮಗಳ ಜನರ ಆಕರ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಈ ರೀತಿಯಾಗಿ ಇರುವ ಕಾರಣ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆಗಮನ ಹೆಚ್ಚಾಗುವದರಲ್ಲಿ ಸಂದೇಹವಿಲ್ಲ. ಪಾರ್ಕಿಂಗ್ ಸಮಸ್ಯೆ ಇನ್ನೂ ಹೆಚ್ಚಿನದಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಇದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಪಿಂಗ್ ಜಾಮ್ ಆಗ್ತಾ ಹೋದರೆ ಮುಂದೆ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ವರದಿ: ಸಂಗಪ್ಪ ಚಲವಾದಿ

Leave a Reply

Your email address will not be published. Required fields are marked *

error: Content is protected !!